ಇಂಜಿನಿಯರಿಂಗ್, ವೈದ್ಯಕೀಯ ಪದವಿ ಪಾಸಾದವರಿಗೆ ಕೇಂದ್ರ ಸರ್ಕಾರದ ಬಿಎಆರ್​ಸಿಯಲ್ಲಿ ಅವಕಾಶ

BARC
Published on

ನವದೆಹಲಿ: ಕೇಂದ್ರ ಸರ್ಕಾರ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್​ನಲ್ಲಿ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಡಿಕಲ್ / ಸೈಂಟಿಫಿಕ್ ಆಫೀಸರ್- ಡಿ, ಟೆಕ್ನಿಕಲ್ ಆಫೀಸರ್ -ಸಿ ಹುದ್ದೆಗಳಿವೆ.

ಎಂಡಿ/ಎಂಎಸ್/ ಡಿಎನ್​ಬಿ, ಎಂಡಿಎಸ್, ಎಂಬಿಬಿಎಸ್, ಎಂಎಸ್ಸಿ, ಬಿಇ, ಬಿಟೆಕ್ ಪಾಸಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಕನಿಷ್ಟ 18 ವರ್ಷ, ಗರಿಷ್ಠ ವಯೋಮಿತಿ ಹುದ್ದೆಗಳಿಗನುಗುಣವಾಗಿ 35/40 ವರ್ಷ ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್ 15 ರವರೆಗೂ ಆನ್​ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ http://www.barc.gov.in ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net