ಎನ್​ಪಿಆರ್​, ಜನಗಣತಿ ನಡೆಯುತ್ತಾ? ಕರೊನಾ ಸಂಕಷ್ಟ ಮುಗಿದ ಬಳಿಕ ಶುರುವಾಗುತ್ತಾ ಲೆಕ್ಕಾಚಾರ?

Census2021
Published on

ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್​ಆರ್​ಸಿ)ಮುನ್ನ ನಡೆಸಲುದ್ದೇಶಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ಜನಗಣತಿ ನಡೆಯುತ್ತಾ ಎಂಬ ಪ್ರಶ್ನೆ ಈಗ ಮತ್ತೆ ಎದುರಾಗಿದೆ.

ಈ ಹಿಂದಿನ ಲೆಕ್ಕಾಚಾರದಂತೆ ಏಪ್ರಿಲ್​ 1ರಿಂದ ಸೆಪ್ಟಂಬರ್​ 30ರವರೆಗಿನ ಆರು ತಿಂಗಳ ಅವಧಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನಡೆಸಲು ಉದ್ದೇಶಿಸಲಾಗಿತ್ತು. ಇದರ ಜತೆಗೆ, ಜನಗಣತಿಯನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಕರೊನಾ ಸಂಕಷ್ಟ ಈ ಪ್ರಕ್ರಿಯೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಕರೊನಾ ಸಂಕಷ್ಟದ ನಡುವೆ ಹಲವು ನಿರ್ಬಂಧಗಳನ್ನು ಸಡಿಲಿಸುತ್ತ, ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ಮರಳಿಸಲು ಕೇಂದ್ರ ಸರ್ಕಾರ ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಕರೊನಾ ಸಂಕಷ್ಟದ ಬಳಿಕ ಈವೆರಡೂ ಯೋಜನೆಗಳನ್ನು ಆರಂಭಿಸಲಾಗುತ್ತದೆ ಎಂಬ ಚರ್ಚೆ ಎದುರಾಗಿದೆ.

ಆದರೆ, ಸದ್ಯಕಂತೂ ಕರೊನಾ ಮಹಾಮಾರಿ ತೊಲಗುವ ಲಕ್ಷಣಗಳಿಲ್ಲ. ಹೀಗಾಗಿ ಕನಿಷ್ಠ ಒಂದು ವರ್ಷವಾದರೂ ಈವೆರಡೂ ಯೋಜನೆಗಳು ಮುಂದಕ್ಕೆ ಹೋಗಲಿವೆ. ಅದರಲ್ಲೂ ಈ ವರ್ಷವಂತೂ ಸಾಧ್ಯವೇ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜನಗಣತಿಯಲ್ಲಿ ಕನಿಷ್ಟ 30 ಲಕ್ಷ ಜನರು ಪಾಲ್ಗೊಳ್ಳುತ್ತಾರೆ ಹಾಗೂ ಜಗತ್ತಿನ ಅತಿದೊಡ್ಡ ಆಡಳಿತಾತ್ಮಕ ಹಾಗೂ ಸಾಂಖ್ಯಿಕ ಪ್ರಕ್ರಿಯೆಯಾಗಿದೆ. ಇದು ಸದ್ಯಕ್ಕೆ ಅಗತ್ಯ ಕಾರ್ಯವೂ ಅಲ್ಲ. ಇನ್ನೊಂದು ವರ್ಷ ಮುಂದೂಡಿದರೂ ಅದರಿಂದ ಯಾವುದೇ ನಷ್ಟವೂ ಇಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net