More

    9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

    ಬೆಂಗಳೂರು: ಕಳೆದ ಬಾರಿ ರಾಜಧಾನಿಯ ಸ್ಟಾರ್ಟಪ್​ ಕಂಪನಿಯೊಂದು ನೀಡಿದ್ದ ಆಫರ್​ವೊಂದು ​ ಭಾರಿ ಹಿಟ್​ ಆಗಿತ್ತು. ತನ್ನಲ್ಲಿ ಇಂಟರ್ನ್​ಶಿಪ್​ ಮಾಡಲು ಕಂಪನಿ ಅಭ್ಯರ್ಥಿಗಳನ್ನು ಆಹ್ವಾನಿಸಿತ್ತು. ಅಷ್ಟಕ್ಕೂ ಅವರಿಗೆ ನೀಡಿದ್ದ ಆಫರ್​ ಏನು ಗೊತ್ತೆ?

    ತನ್ನಲ್ಲಿ ಇಂಟರ್ನ್​ಶಿಪ್​ ಬಯಸುವ ಅಭ್ಯರ್ಥಿಗಳು 9 ತಾಸುಗಳವರೆಗೆ ನಿದ್ದೆ ಮಾಡಬೇಕು. ನೂರು ದಿನಗಳ ಇಂಟರ್ನ್​ಶಿಪ್​ ಅವಧಿಗೆ ಒಂದು ಲಕ್ಷ ರೂ. ನೀಡಲಾಗುತ್ತದೆ…!

    ಇದನ್ನೂ ಓದಿ; ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್​; ಅನ್​ಲಾಕ್​ 4.0 ಮಾರ್ಗಸೂಚಿ 

    ಹಾಗೆಂದು ಈ ಆಫರ್​ ಪಡೆದುಕೊಳ್ಳುವುದು ಅಷ್ಟು ಸುಲಭವೇನಲ್ಲ. ನಿಮಗೆ ನಿದ್ದೆಯೇ ಸರ್ವಸ್ವ ಎಂಬುದನ್ನು ನೀವು ಕಂಪನಿಯವರಿಗೆ ಪ್ರೂವ್​ ಮಾಡಿ ತೋರಿಸಬೇಕು. ಅಭ್ಯರ್ಥಿಗಳಿಗೆ ಎಲ್ಲಕ್ಕಿಂತ ಪ್ರೀತಿಸುವ ಕೆಲಸ ಕೂಡ ನಿದ್ದೆಯೇ ಆಗಿರಬೇಕು ಎಂಬುದು ಷರತ್ತು.

    ಕಳೆದ ಬಾರಿ ಈ ಆಫರ್​ ಭಾರಿ ಹಿಟ್​ ಆಗಿತ್ತು. 1.7 ಲಕ್ಷ ಜನರು ಈ ಇಂಟರ್ನ್​ಶಿಪ್​ಗಾಗಿ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ 23 ಜನರನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು ಎಂದು ಈ ಉದ್ಯೋಗಾವಕಾಶ ನೀಡಿರುವ ವೇಕ್​ಫಿಟ್​ ಮ್ಯಾಟ್ರೆಸ್​ ಕಂಪನಿ ಮಾಹಿತಿ ನೀಡಿದೆ. ಈಗ 2021ರ ಇಂಟರ್ನಶಿಪ್​ಗೆ ಅರ್ಜಿ ಕರೆದಿದೆ.
    ಅಭ್ಯರ್ಥಿಗಳು ತಮಗೆ ನೀಡಲಾಗುವ ವಿಶೇಷ ಹಾಸಿಗೆ ಮೇಲೆ ಮಲಗಬೇಕಾಗುತ್ತದೆ. ಕಂಪನಿಯವರು ಅವರ ನಿದ್ರಾಭಂಗಿ ಬಗ್ಗೆ ನೂರು ದಿನಗಳವರೆಗೆ ನಿಗಾ ವಹಿಸುತ್ತಾರೆ. ನೂರು ದಿನಗಳ ನಂತರವಷ್ಟೇ ಹಣ ನೀಡಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ; ಭಾರತದಿಂದ ಕರೊನಾ ಲಸಿಕೆ ಪಡೆಯುವ ಮೊದಲ ರಾಷ್ಟ್ರ ಬಾಂಗ್ಲಾ; ಪುಣೆ ಕಂಪನಿಯಲ್ಲಿ ಬಂಡವಾಳ ಹೂಡಿದ ಬೆಕ್ಸಿಮ್ಕೋ 

    ಜನರಿಗೆ ನಿದ್ದೆ ಬಗ್ಗೆ ಇರುವ ಮಿಥ್ಯೆ, ಮನೋಭಾವಗಳನ್ನು ದೂರ ಮಾಡುವುದೇ ಇದರ ಉದ್ದೇಶವಂತೆ. ನಿದ್ದೆ ಆರೋಗ್ಯಕರ ಹಾಗೂ ಉತ್ಪಾದನಾಶೀಲ ಸಂಗತಿ ಎನ್ನುವುದನ್ನು ತಿಳಿಸುವುದು ಕಂಪನಿ ಧ್ಯೇಯವಂತೆ. ಇರಬಹುದು ಹಾಸಿಗೆ ತಯಾರು ಮಾಡೋ ಕಂಪನಿಗೆ ಇನ್ಯಾವ ಗುರಿ ಇರೋಕೆ ಸಾಧ್ಯ ಎಂದು ನೆಟ್ಟಿಗರೂ ಕಾಲೆಳೆಯುತ್ತಿದ್ದಾರೆ.

    ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts