More

    ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

    ನವದೆಹಲಿ: ಸದ್ಯ ಜಗತ್ತಿನಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಕರೊನಾ ವೈರಸ್​ ನಿಗ್ರಹ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ( ಮಾನವರ ಮೇಲೆ ಪ್ರಯೋಗ) ಭಾರತದಲ್ಲೂ ಆರಂಭವಾಗಿದೆ.

    ಆಕ್ಸ್​ಫರ್ಡ್​ ವಿವಿ ತಂಡ ಬ್ರಿಟನ್​ನ ಅಸ್ಟ್ರಾಜೆನೆಕಾ ಕಂಪನಿ ಜತೆಗೂಡಿ ಅಭಿವೃದ್ಧಿ ಪಡಿಸಿರುವ ಈ ಲಸಿಕೆ ಈಗಾಗಲೇ ಬ್ರಿಟನ್​, ಅಮೆರಿಕ ಹಾಗೂ ಬ್ರೆಜಿಲ್​ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಪರೀಕ್ಷೆಯಲ್ಲಿದೆ. ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

    ಇದನ್ನೂ ಓದಿ; ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

    ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್​ ಎಂದು ಹೆಸರಿಸಲಾಗಿದ್ದು, ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸಿ, ಮಾರಾಟ ಮಾಡಲಿದೆ. ಹೀಗಾಗಿ ಇದರ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಚಾಲನೆ ನೀಡಿದೆ.

    ಪುಣೆಯ ಭಾರತಿ ವಿದ್ಯಾಪೀಠ ಡೀಮ್ಡ್​ ವಿವಿಯ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಜತೆಗೆ ಮುಂಬೈನ ಇನ್ನೆರಡು ಆಸ್ಪತ್ರೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ದೇಶದ 17 ಸ್ಥಳಗಳಲ್ಲಿ 1,600ಕ್ಕೂ ಹೆಚ್ಚು ಜನರಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಮುಖ್ಯ ಸಂಶೋಧನಾಧಿಕಾರಿ ಸಂಜಯ್​ ಲಾಲ್ವಾನಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆ ಕೂಡ ಸೇರಿದೆ.

    ಇದನ್ನೂ ಓದಿ; ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…! 

    ಬಹುಶಃ ಈ ಲಸಿಕೆ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಲಸಿಕೆ ಎನಿಸಿದರೂ ಅಚ್ಚರಿಯಿಲ್ಲ. ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನ ಈ ಕಂಪನಿಗೆ 1,125 ಕೋಟಿ ರೂ. (150 ಮಿಲಿಯನ್ ಡಾಲರ್​ ) ಆರ್ಥಿಕ ನೆರವು ನೀಡಿದ್ದು, ಕೇವಲ ಮೂರು ಡಾಲರ್​ಗೆ ಒಂದು ಡೋಸ್​ನಂತೆ (225 ರೂ.) ಲಸಿಕೆ ಉತ್ಪಾದಿಸಿ ವಿತರಣೆ ಮಾಡಲಿದೆ.

    ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts