More

    ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!

    ನವದೆಹಲಿ: ದೇಶದಲ್ಲಿ ಕಳೆದ 24 ತಾಸುಗಳಲ್ಲಿ 60,975 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 31,67,323ಕ್ಕೆ ಏರಿಕೆಯಾಗಿದೆ.

    ಕೋವಿಡ್​ ನಿಯಂತ್ರಣಕ್ಕೆ ಸಿಗದೆ ಹೆಚ್ಚಾಗುತ್ತಿರುವುದಕ್ಕೆ ಕಳವಳವೂ ವ್ಯಕ್ತವಾಗುತ್ತಿದೆ. ಹಿರಿಯರೂ ಅಲ್ಲ, ಕಿರಿಯರೂ ಅಲ್ಲ, ಅರಿವುಗೇಡಿ ಜನರೇ ಇದಕ್ಕೆ ಕಾರಣರಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್​) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ; 2019-20ರಲ್ಲಿ 2 ಸಾವಿರ ಮುಖಬೆಲೆಯ ಒಂದು ನೋಟೂ ಪ್ರಿಂಟಾಗಿಲ್ಲ…! ಏನಿದರ ಅರ್ಥ?

    ಹೆಚ್ಚು ಕಾಳಜಿ ಇಲ್ಲದ, ಮಾಸ್ಕ್​ ಧರಿಸದೇ ಓಡಾಡುತ್ತಿರುವ ಜನರಿಂದಲೇ ಕರೊನಾ ಸಂಕಷ್ಟ ಮುಂದುವರಿಯುತ್ತಿದೆ ಎಂದು ಐಸಿಎಂಆರ್​ ಮಹಾನಿರ್ದೇಶಕ ಡಾ. ಬಲರಾಮ್​ ಭಾರ್ಗವ್​ ಹೇಳಿದ್ದಾರೆ.

    ಸದ್ಯ ದೇಶದಲ್ಲಿ ಮೂರು ಕರೊನಾ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಲಸಿಕೆ ಎರಡನೇ ಹಂತದಲ್ಲಿದ್ದರೆ, ದೇಶೀಯ ಕೋವಾಕ್ಸಿನ್​ ಹಾಗೂ ಝೈಡಸ್​ ಕ್ಯಾಡಿಲ್ಲಾದ ಲಸಿಕೆ ಮೊದಲನೇ ಹಂತದ ಪರೀಕ್ಷೆ ಪೂರ್ಣಗೊಳಿಸಿವೆ ಎಂದು ಅವರು ಮಾಹಿತಿ ನೀಡಿದರು.

    ಇದನ್ನೂ ಓದಿ; ಹೆಚ್ಚುತ್ತಿರುವ ಕರೊನಾ ಸಂಕಷ್ಟ; ಸೆಪ್ಟಂಬರ್​ನಲ್ಲಿ ಶಾಲಾರಾಂಭಕ್ಕೆ ಸಜ್ಜಾಗಿದೆ ಈ ದೇಶ

    ದೇಶದಲ್ಲಿ ಕರೊನಾದಿಂದ ಗುಣಮುಖರಾಗುತ್ತಿರುವವ ಪ್ರಮಾಣ ಶೇ.75.92ಕ್ಕೆ ಏರಿಕೆಯಾಗಿದ್ದು, ಈವರೆಗೆ 24,04,585 ಜನರು ಚೇತರಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ಶೇ.1.84 ಆಗಿದೆ ಎಂದು ಅವರು ತಿಳಿಸಿದ್ದಾರೆ.

    ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts