More

    ಪತಿಯ ಪಾಸ್​​ಪೋರ್ಟ್​ ಬಳಸಿ ಪ್ರಿಯತಮನನ್ನು ಟ್ರಿಪ್​ಗೆ ಕರೆದುಕೊಂಡು ಹೋದ ಮಹಿಳೆ; ಮುಂದಾಗಿದ್ದು ದೊಡ್ಡ ಫಜೀತಿ

    ಪಿಲಿಭಿತ್​: ಇಲ್ಲೋರ್ವ ಮಹಿಳೆ ಮಾಡಿಕೊಂಡ ಫಜೀತಿ ಅಷ್ಟಿಷ್ಟಲ್ಲ. ಲವರ್​ ಜತೆ ಆಸ್ಟ್ರೇಲಿಯಾಕ್ಕೆ ಹಾರಿ, ಕರೊನಾದಿಂದ ಸಿಕ್ಕಿಬಿದ್ದು..ನಂತರ ಆಕೆಯ ಪತಿ ಪೊಲೀಸರಿಗೆ ದೂರು ಕೊಟ್ಟಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    36 ವರ್ಷದ ಮಹಿಳೆ ತನ್ನ ಪತಿಯ ಪಾಸ್​​ಪೋರ್ಟ್​ನಿಂದ ಪ್ರಿಯತಮನನ್ನು ಕರೆದುಕೊಂಡು ಆಸ್ಟ್ರೇಲಿಯಾಕ್ಕೆ ಹೋಗಿದ್ದಳು. ಜನವರಿಯಲ್ಲಿ ಇವರಿಬ್ಬರೂ ಫ್ಲೈಟ್​​ನಲ್ಲಿ ಹಾರಿದ್ದರು. ಆ ಲವರ್​​ಗೆ ಪಾಸ್​ಪೋರ್ಟ್​ ಇಲ್ಲದಿದ್ದರೂ, ತನ್ನ ಪತಿಯ ಪಾಸ್​ಪೋರ್ಟ್​ ಬಳಸಿಯೇ ಕರೆದುಕೊಂಡು ಹೋಗಿದ್ದ ಮಹಿಳೆ, ಮಾರ್ಚ್​​ನಲ್ಲಿ ವಾಪಸ್​ ದೇಶಕ್ಕೆ ಬರುವ ಯೋಜನೆ​ ಹಾಕಿದ್ದಳು. ಆದರೆ ಇವರಿಬ್ಬರ ಅದೃಷ್ಟ ಕೆಟ್ಟಿತ್ತು. ಅದೇ ಹೊತ್ತಿಗೆ ಕರೊನಾ ವೈರಸ್​ ದಾಂಗುಡಿಯಿಟ್ಟು, ಅಂತಾರಾಷ್ಟ್ರೀಯ ವಿಮಾನಗಳೆಲ್ಲ ಹಾರಾಟ ನಿಲ್ಲಿಸಿದವು. ಹಾಗಾಗಿ ಮಾರ್ಚ್​​​ನಲ್ಲಿ ವಾಪಸ್​ ಬರಬೇಕಿದ್ದ ಮಹಿಳೆ ಮತ್ತು ಅವಳ ಪ್ರಿಯತಮ ಆಗಸ್ಟ್​ 24ರಂದು ಮರಳಿ ದೇಶಕ್ಕೆ ಬಂದಿದ್ದಾರೆ.

    ಮಹಿಳೆ ದಮ್​​ಗರ್ಹಿ ಎಂಬ ಗ್ರಾಮದ ನಿವಾಸಿ. ಆಗಸ್ಟ್​ 24ರಂದು ಭಾರತಕ್ಕೆ ವಾಪಸ್​ ಬಂದಿದ್ದಾರೆ. ಆದರೆ ಇಲ್ಲಿ ಬಂದಕೂಡಲೇ ಪತಿ ಬಿಗ್ ಶಾಕ್​ ಕೊಟ್ಟಿದ್ದಾರೆ. ನನ್ನ ಪತ್ನಿ ಸ್ಥಳೀಯ 36 ವರ್ಷದ ಸಂದೀಪ್​ ಸಿಂಗ್​ ಜತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾಳೆ. ಅಷ್ಟೇ ಅಲ್ಲ ನಕಲಿ ದಾಖಲೆಗಳನ್ನು ಬಳಸಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾಳೆ ಎಂದು ದೂರಿನಲ್ಲಿ  ಉಲ್ಲೇಖಿಸಿದ್ದಾರೆ.

    ನಾನು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಪಿಲಿಭಿತ್​ನಲ್ಲಿ ನಮ್ಮ ಪೂರ್ವಜರ ಆಸ್ತಿ ಇರುವುದರಿಂದ ಅದರ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ಪತ್ನಿ ಅಲ್ಲಿಯೇ ಇರುತ್ತಾಳೆ. ನಾನೂ ಆಗಾಗ ಮುಂಬೈನಿಂದ ಪಿಲಿಭಿತ್​ಗೆ ಹೋಗಿ, ಪತ್ನಿಯನ್ನು ಭೇಟಿಯಾಗುತ್ತಿದ್ದೆ. ಹಾಗೇ ಮೇ 18ರಂದು ಪಿಲಿಭಿತ್​ಗೆ ಹೋದಾಗ ನನ್ನ ಪತ್ನಿ ಇರಲಿಲ್ಲ. ಆಕೆಯ ಪ್ರಿಯಕರ ಸಂದೀಪ್​​ ಜತೆ ಆಸ್ಟ್ರೇಲಿಯಾಕ್ಕೆ ಹೋಗಿರುವ ವಿಚಾರ ತಿಳಿಯಿತು. ಸಂದೀಪ್​ ಕುಟುಂಬದವರೇ ನನಗೆ ಇದನ್ನು ತಿಳಿಸಿದರು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

    ಸದ್ಯ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ್ದು ಗಂಭೀರ ವಿಷಯ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)

    ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts