ಎರಡನೇ ಪತ್ನಿಯ ಅಮಾನುಷ ಹತ್ಯೆ; ದೇಹವನ್ನು 50 ತುಂಡು ಮಾಡಿ ಎಸೆದು ಬಂದ ಪತಿ!

Chopped Body
Published on

ಪಾಟ್ನಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಂತಹ ಶ್ರದ್ಧಾ ಕೊಲೆ ಕೇಸ್​​ನಂತೆ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಜಾರ್ಖಂಡ್ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಪತಿಯೇ ಕೊಂದು ಆಕೆಯ ದೇಹವನ್ನು 50 ತುಂಡುಗಳನ್ನಾಗಿ ಮಾಡಿದ್ದಾನೆ. ನಂತರ ವಿವಿಧೆಡೆ ಎಸೆದು ಬಂದಿದ್ದಾನೆ. ಇದೀಗ ಪೊಲೀಸರು ದೇಹದ 18 ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿ ಪತಿ ದಿಲ್ದಾರ್ ಅನ್ಸಾರಿ ಎರಡು ಮದುವೆಯಾಗಿದ್ದ. ಇದೀಗ ತನ್ನ ಎರಡನೇ ಪತ್ನಿ ರೂಬಿಕಾಳನ್ನು ಅಮಾನುಶವಾಗಿ ಹತ್ಯೆ ಮಾಡಿದ್ದಾನೆ. ನಂತರ ದೇಹವನ್ನು ತುಂಡುಗಳನ್ನಾಗಿ ಮಾಡಿ ವಿವಿಧೆಡೆ ಎಸೆದು ಬಂದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿತ್ತು, ಎಸೆದು ಬಂದಿರುವ ದೇಹದ ತುಂಡುಗಳನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಸಂತಾಲ್​ನ ಡಿಐಜಿ ಸುದರ್ಶನ್ ಪ್ರಸಾದ್ ಮಂಡಲ್ ಮಾಹಿತಿ ನೀಡಿದ್ದಾರೆ.

ಕಳೆದ ಶನಿವಾರ (ಡಿ.17) ಬೋರಿಯೊ ಸಂತಾಲಿ ಎಂಬ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಹಿಳೆಯ ಕಾಲಿನ ತುಂಡು ಪತ್ತೆಯಾಗಿದೆ. ಇದನ್ನು ಬೆನ್ನು ಹತ್ತಿದ ಪೊಲೀಸರಿಗೆ ದಿಲ್ದಾರ್ ಅನ್ಸಾರಿ ಪತ್ನಿಯನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ. ದಿಲ್ದಾನ್ ಅನ್ಸಾರಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕೃತ್ಯಕ್ಕೆ ಬಳಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಲೆಯಾಗಿ ಹೋಗಿರುವ ರೂಬಿಕಾಳ ಸಹೋದರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ತಂಗಿ ಕೊಲೆಯಾಗಿ ಹೋಗಲು ಪತಿಯ ಮನೆಯವರೇ ಕಾರಣ. ದಿಲ್ದಾರ್ ಅನ್ಸಾರಿ ಮನೆಯಲ್ಲಿ ಇಲ್ಲದ ವೇಳೆ ಆತನ ಕುಟುಂಬಸ್ಥರು ಕೊಲೆ ಮಾಡಿದ್ದಾರೆ. ಮೊದಲಿನಿಂದಲೂ ಆಕೆ ಗಂಡನ ಕುಟುಂಬಸ್ಥರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಳು ಎಂದು ಆರೋಪಿಸಿದ್ದಾಳೆ.

ವರದಿಯ ಪ್ರಕಾರ ಆರೋಪಿ ದಿಲ್ದಾರ್ ಅನ್ಸಾರಿಯ ತನ್ನ ಮಾವ ಮೊಯಿನುಲ್ ಅನ್ಸಾರಿ ವಾಸವಿದ್ದ ಮನೆಯಲ್ಲಿ ರೂಬಿಕಾಳನ್ನು ಕೊಲೆ ಮಾಡಲಾಗಿದೆ. ನಂತರ ಕಬ್ಬಿಣ ತುಂಡು ಮಾಡುವ ಯಂತ್ರ ಬಳಸಿ ದೇಹವನ್ನು ಕತ್ತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯ ಪ್ರಕಾರ, ತನಿಖಾಧಿಕಾರಿಗಳು ದಿಲ್ದಾರ್ ಅನ್ಸಾರಿ ತಂದೆ ಮುಸ್ತಾಕಿಮ್ ಅನ್ಸಾರಿ, ತಾಯಿ ಮರ್ಯಮ್ ಖಾತೂನ್, ಮೊದಲ ಪತ್ನಿ ಗುಲೇರಾ, ಸಹೋದರಿ ಶೇರ್ಜಾ ಖಾತೂನ್, ಸಹೋದರರಾದ ಅಮೀರ್ ಅನ್ಸಾರಿ ಮತ್ತು ಮಹತಾಬ್ ಅನ್ಸಾರಿ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net