ವಯಸ್ಸಾದ್ರೂ ಮಕ್ಕಳಿಗೆ ಮದುವೆ ಆಗ್ಲಿಲ್ಲ ಎಂಬ ಚಿಂತೆ; ಒಂದೇ ಕುಟುಂಬದ ಮೂವರ ಪ್ರಾಣತ್ಯಾಗ!

ಆತ್ಮಹತ್ಯೆ
Published on

ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಶೋಧಾ(70), ಸುಮನ್(41), ನರೇಶ್ ಗುಪ್ತಾ(36) ಎಂಬ ತಾಯಿ, ಮಗಳು ಹಾಗೂ ಮಗ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಮಹಾಲಕ್ಷ್ಮೀ ಲೇಔಟ್​​ನ ಮನೆಯೊಂದರಲ್ಲಿ ವಾಸವಾಗಿದ್ದ ತಾಯಿ, ಮಗಳು ಹಾಗೂ ಮಗ ವಾಸವಾಗಿದ್ದರು. ಯಶೋಧ ಅವರಿಗೆ ಮೂವರು ಮಕ್ಕಳಿದ್ದು, ಒಬ್ಬ ಮಗಳ ಮದುವೆಯಾಗಿ ರಾರಾಜಿನಗರದಲ್ಲಿ ನೆಲೆಸಿದ್ದರು. ಮತ್ತೋರ್ವ ಪುತ್ರಿ ಸುಮನ್ ಹಾಗೂ ಮಗ ನರೇಶ್ ತಾಯಿಯೊಂದಿಗೆ ವಾಸವಾಗಿದ್ದ. ನರೇಶ್​ ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಇದೀಗ ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಯಶೋಧ ಅವರಿಗೆ ಕುಟುಂಬಸ್ಥರು ಎಷ್ಟೇ ಬಾರಿ ಕರೆ ಮಾಡಿದರೂ, ಫೋನ್ ಸ್ವೀಕರಿಸಿಲ್ಲ. ಹೀಗಾಗಿ ಸಂಬಂಧಿಕರು ರಾರಾಜಿನಗರದಲ್ಲಿ ವಾಸವಾಗಿದ್ದ ಮಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಮಗಳು ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮನೆಯಲ್ಲಿದ್ದ ಮಗ ಹಾಗೂ ಮಗಳಿಗೆ ವಯಸ್ಸಾದರೂ ಮದುವೆ ಆಗಿರಲಿಲ್ಲ. ಮಗಳ ಆರೋಗ್ಯ ಸಮಸ್ಯೆಯೂ ಹದಗೆಟ್ಟಿತ್ತು. ಇದರಿಂದ ತಾಯಿ ಯಶೋಧಾ ಹಾಗೂ ಮಕ್ಕಳು ಮನನೊಂದಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net