

ತರೀಕೆರೆ: ಯೇಸುಕ್ರಿಸ್ತರ 12 ಶಿಷ್ಯರಲ್ಲಿ ಒಬ್ಬರಾದ ಥೋಮಸ್ ಎಂಬುವರು ಭಾರತಕ್ಕೆ ಜು.3ರಂದು ಆಗಮಿಸಿ ಅಂದಿನ ಮದ್ರಾಸ್, ಕೇರಳ ಇತರ ಕಡೆ ಸಂಚರಿಸುವ ಮೂಲಕ ದೇಶದಾದ್ಯಂತ ಯೇಸುಕ್ರಿಸ್ತರ ಸಂದೇಶ ಸಾರುತ್ತ ಈಗಿನ ಚೆನೈನಲ್ಲಿ ರಕ್ತ ಸಾಕ್ಷಿಯಾದರು ಎಂದು ಪಟ್ಟಣದ ಕೋಡಿಕ್ಯಾಂಪ್ ಆರ್‌ಸಿ ಚರ್ಚ್ ಾದರ್ ಎಲಿಯಾಸ್ ಹೇಳಿದರು.
ಥೋಮಸ್ ಭಾರತಕ್ಕೆ ಆಗಮಿಸಿದ ದಿನದ ಹಿನ್ನೆಲೆಯಲ್ಲಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಫಿಲೋಷಿಪ್‌ನಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತ ಅತ್ಯಂತ ಅಮೂಲ್ಯವಾದುದು. ಇದಕ್ಕೆ ಪರ್ಯಾಯ ವಸ್ತುಗಳಿಲ್ಲದ ಪರಿಣಾಮ ಬಿಪಿ, ಶುಗರ್ ಇತರೆ ಯಾವುದೇ ರೋಗವಿಲ್ಲದ ಸಾಮಾನ್ಯ ವ್ಯಕ್ತಿ 90 ದಿನಗಳಿಗೊಮ್ಮೆ ರಕ್ತದಾನ ಮಾಡಬಹುದು. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವುದರಿಂದ ರಕ್ತದ ಅನೇಕ ಜೀವಗಳನ್ನು ರಕ್ಷಿಸುವಂತಹ ಸುವರ್ಣವಕಾಶ ದೊರೆಯಲಿದೆ ಎಂದರು.
ಯುನೈಟೆಡ್ ಕ್ರಿಶ್ಚಿಯನ್ ಫಿಲೋಶಿಪ್ ಅಧ್ಯಕ್ಷ ಾಸ್ಟರ್ ಸಿ.ಎಸ್.ಜೋಸ್ ಮಾತನಾಡಿ, ರಕ್ತದಾನ ಶಿಬಿರದಲ್ಲಿ ಕ್ರಿಶ್ಚಿಯನ್ ಸಮುದಾಯದವರಲ್ಲದೆ ಇತರ ಸಮಾಜದ ನೂರಾರು ಯುವಕರು ರಕ್ತದಾನ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್ ಕೋ ಆರ್ಡಿನೇಟರ್ ಎಸ್.ಎ.ಹನುಮಂತಪ್ಪ, ಯುನೈಟೆಡ್ ಕ್ರಿಶ್ಚಿಯನ್ ಫಿಲೋಶಿಪ್ ಕಾರ್ಯದರ್ಶಿ ಮಂಜಪ್ಪ, ಸಮಾಜ ಸೇವಕ ಸೆಲ್ವಿನ್ ಇತರರಿದ್ದರು.