ತಂದೆ ಬೋನಿ ಕಪೂರ್​ ಬದಲಾಗಿದ್ದು ಈ ಕಾರಣಕ್ಕಾಗಿ; Janhvi Kapoor ಹೀಗೆಳಿದ್ದೇಕೆ?

Untitled-design-2024-09-25T194504.788
Published on

ಮುಂಬೈ: ಪ್ಯಾನ್​ ಇಂಡಿಯಾ ಸಿನಿಮಾ ದೇವರ ತಂಡವು ಪ್ರಚಾರದಲ್ಲಿ ತೊಡಗಿದೆ. ಪ್ರಚಾರದ ಅಂಗವಾಗಿ ಕಪಿಲ್ ಶರ್ಮಾ ಅವರ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಎರಡನೇ ಸೀಸನಲ್ಲಿ ಪಾಲ್ಗೊಂಡಿರುವುದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಾಣಸಿಗಲಿದೆ. ದೇವರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಯಂಗ್​ ಟೈಗರ್ ಎನ್​ಟಿಆರ್​​, ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್ ಅವರು ಮಾತನಾಡಿರುವ ಕೆಲವು ಕ್ಲಿಪ್​​ ಹೊರಬಿದ್ದಿದೆ. ಅದರಲ್ಲಿ ಜಾನ್ವಿ ತನ್ನ ತಾಯಿ ಶ್ರೀದೇವಿ ಬಗ್ಗೆ ಮಾತನಾಡಿದ್ದಾರೆ.

ಪ್ರೋಮೋದಲ್ಲಿ ಕಪಿಲ್ ಜೂನಿಯರ್ ಎನ್‌ಟಿಆರ್‌ಗೆ ಉತ್ತರ ಭಾರತದ ನೆಚ್ಚಿನ ನಟಿ ಯಾರು ಎಂದು ಕೇಳಿದಾಗ ಅವರು ಶ್ರೀದೇವಿ ಎಂಬ ಹೇಳುತ್ತಾರೆ. ಅದಕ್ಕೆ ಅಡ್ಡಿಪಡಿಸಿದ ಸೈಫ್, ಇಲ್ಲಿ ನನ್ನ ಉತ್ತರವು ಶ್ರೀದೇವಿ ಎಂದು ತಿಳಿಸುತ್ತಾರೆ. ತಮಿಳುನಾಡಿನಲ್ಲಿ ಹುಟ್ಟಿ ತಮಿಳು-ತೆಲುಗು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ಶ್ರೀದೇವಿಯು ಬಾಲಿವುಡ್​​​ನಲ್ಲಿಯೂ ಬಹುಬೇಡಿಕೆಯ ನಟಿಯಾಗಿದ್ದರು. ದಕ್ಷಿಣ ಭಾರತದ ಈ ನಟಿ ಉತ್ತರ ಭಾರತದ ಪಂಜಾಬಿ ಕುಟುಂಬದಿಂದ ಬಂದ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದದ್ದು ಗೊತ್ತೆ ಇದೆ.

ದಕ್ಷಿಣದಿಂದ ಬಂದ ಶ್ರೀದೇವಿ ಮತ್ತು ಬೋನಿ ಕಪೂರ್ ಹೇಗೆ ಬದಲಾಗಿದ್ದರು ಎಂಬುದನ್ನು ಜಾನ್ವಿ ಕಪೂರ್​ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆ ದಕ್ಷಿಣ ಭಾರತೀಯರಾಗಿ ಬದಲಾಗಿಬಿಟ್ಟಿದ್ದರು. ಅಂದರೆ ಅವರ ಆಹಾರ ಶೈಲಿ ಬದಲಾಗಿತ್ತು ಎಂದು ತಿಳಿಸಿದ್ದಾರೆ. ಮದುವೆಯ ನಂತರ ಅಪ್ಪ ಬೆಳಗ್ಗೆ ಪರಾಠದ ಬದಲಿಗೆ ಇಡ್ಲಿ ಸಾಂಬಾರ್​ ತಿನ್ನುತ್ತಿದ್ದರು. ಆದರೆ ತಾಯಿ ಉತ್ತರ ಭಾರತದ ಮಹಿಳೆಯರಿಂತೆ ಜಗಳ ಆಡುತ್ತಿದ್ದರು ಎಂದು ಹೇಳಿದ್ದಾರೆ.

ಮದುವೆಯ ನಂತರ ಬೋನಿ ಕಪೂರ್​ ಹಾಗೂ ಶ್ರೀದೇವಿ ಇಬ್ಬರೂ ಹೇಗೆ ಪರಸ್ಪರ ಸಂಸ್ಕೃತಿಯೊಂದಿಗೆ ಬೆರೆಯಲು ಪ್ರಾರಂಭಿಸಿದ್ದರು ಎಂಬುದು ಜಾನ್ವಿ ಕಪೂರ್​ ಮಾತಿನಿಂದ ಸ್ಪಷ್ಟವಾಗಿದೆ. ಸದ್ಯ ಪ್ರೋಮೋ ತುಂಬಾ ತಮಾಷೆಯಾಗಿ ಕಾಣುತ್ತಿದ್ದು, ಕಾರ್ಯಕ್ರಮ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಬಿಗ್​​ ಬಜೆಟ್​ನಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಪೋಸ್ಟರ್​ಗಳು ಸಿನಿಮಾದ ಮೇಲಿನ ನೀರಿಕ್ಷೆಗಳನ್ನು ಹೆಚ್ಚಿಸಿವೆ.ದೇವರ ಮೊದಲ ಭಾಗ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net