ಹೈದರಾಬಾದ್: ಟಾಲಿವುಡ್(Tollywood) ನಟ ನಾರ್ಗಾಜುನ ಪುತ್ರ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ಗೊತ್ತೆ ಇದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿತ್ತು. ಇದೀಗ ಚೈತನ್ಯರೊಂದಿಗಿನ ನಿಶ್ಚಿತಾರ್ಥ ಹಾಗೂ ತಮಗಿರುವ ಆಸೆ ಮತ್ತು ಕನಸಿನ ಬಗ್ಗೆ ಸೋಭಿತಾ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Darling Prabhas ನಟನೆಯ ಫೌಜಿ ಚಿತ್ರತಂಡಕ್ಕೆ ಸೇರ್ಪಡೆಯಾದ ‘ಈ ಬಂಧನ’ದ ನಟಿ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಮಾತನಾಡಿರುವ ಸೋಭಿತಾ, ನಾಗ ಚೈತನ್ಯ ಜತೆಗಿನ ನಿಶ್ಚಿತಾರ್ಥವು ತಾನು ಬಯಸಿದ ರೀತಿಯಲ್ಲಿಯೇ ನಡೆದಿದೆ. ಅದು ಸರಳವಾಗಿ ನಡೆದಿರಲಿ ಅಥವಾ ಇಲ್ಲದಿರಲಿ ನಾನು ಅದರ ಬಗ್ಗೆ ಚಿಂತಿಸುವುದಿಲ್ಲ. ಅನೇಕ ಕನಸುಗಳು ಅಥವಾ ನಿರೀಕ್ಷೆಗಳೊಂದಿಗೆ ಆ ಕ್ಷಣಕ್ಕಾಗಿ ನಾನು ಕಾಯಲಿಲ್ಲ. ಆ ಕ್ಷಣವನ್ನು ನಾನು ಆನಂದಿಸಿದೆ, ಅದು ತುಂಬಾ ಸರಳ, ನಿರಾಳ ಮತ್ತು ಸಿಹಿಯಾಗಿತ್ತು. ನಾನು ಅಂದುಕೊಂಡತೆಯೇ ನಿಶ್ಚಿತಾರ್ಥ ನಡೆದಿದೆ ಎಂದು ಹೇಳಿದರು.
ಸುಂದರವಾದ ಸಂಗತಿಗಳು ಸಂಭವಿಸಿದಾಗ ಯಾವುದೇ ಅಲಂಕಾರದ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಆ ಕ್ಷಣ ಸಾಕು ನನಗೆ. ಅದಕ್ಕೆ ಈ ನಿಶ್ಚಿತಾರ್ಥ ಸಿಂಪಲ್ ಎಂದು ನನಗೆ ಅನ್ನಿಸಲಿಲ್ಲ. ಅದು ಯಥಾಪ್ರಕಾರವಾಗಿ ಪರ್ಫೆಕ್ಟ್ ಆಗಿ ನಡೆಯಿತು ಎಂದು ತಿಳಿಸಿದರು.
ಅಲ್ಲದೆ ನಾನು ಯಾವಾಗಲೂ ಪರಿಪೂರ್ಣ ಮಾತೃತ್ವವನ್ನು ಆನಂದಿಸಲು ಮತ್ತು ಮದುವೆಯಾಗಲು ಬಯಸುತ್ತೇನೆ. ಇದರ ಬಗ್ಗೆ ಸ್ಪಷ್ಟವಾಗಿದ್ದೇನೆ. ನನಗೆ ತಾಯಿಯಾಗು ಅನುಭವವನ್ನು ಪಡೆಯುವ ಆಸೆ ಇದೆ. ಆದರೆ ಇಂತಹ ಖುಷಿಯ ಘಟನೆಗಳು ನಡೆದಾಗ ತೆಲುಗು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ನಾನು ಯಾವಾಗಲೂ ನನ್ನ ಬೇರುಗಳಿಗೆ, ಸಂಪ್ರದಾಯಕ್ಕೆ ಮತ್ತು ನನ್ನ ಹೆತ್ತವರಿಗೆ ತುಂಬಾ ಅಂಟಿಕೊಂಡಿದ್ದೇನೆ. ಈ ಅನುಭವವೂ ನಾನು ಊಹಿಸಿದ ವಿಷಯ ಎಂದು ಹೇಳಿದರು.
ಆಗಸ್ಟ್ 9 ರಂದು ನಾಗಚೈತನ್ಯ ಮತ್ತು ಸೋಭಿತಾ ನಿಶ್ಚಿತಾರ್ಥ ನಾಗಾರ್ಜುನ ಮನೆಯಲ್ಲಿ ಕೆಲವು ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು ಎಂದು ತಿಳಿದಿದೆ. ಆದರೆ ಇದುವರೆಗೂ ಅವರು ತಮ್ಮ ಮದುವೆಯ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ ಅದೇ ಸಂದರ್ಶನದಲ್ಲಿ ಸೋಭಿತಾ ಮದುವೆಗೆ ಯಾವ ರೀತಿಯ ಸೀರೆ ಉಡುತ್ತೇನೆ ಎಂದೂ ಹೇಳಿದ್ದಾರೆ. ಸಾಮಾನ್ಯವಾಗಿ ತೆಲುಗು ಮದುವೆಗಳಲ್ಲಿ ಹುಡುಗಿಯರು ಕೆಂಪು ಬಾರ್ಡರ್ ಇರುವ ಬಿಳಿ ರೇಷ್ಮೆ ಸೀರೆಯನ್ನು ಧರಿಸುತ್ತಾರೆ. ಅದರಂತೆ ತಾನೂ ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
Mega Brothers| ಒಂದೇ ತಿಂಗಳಿನಲ್ಲಿ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದ ಸಹೋದರರು; ವಿಶೇಷ ಏನು ಗೊತ್ತಾ?