ಹೈದರಾಬಾದ್: ಟಾಲಿವುಡ್ನಲ್ಲಿ ಮೆಗಾ ಫ್ಯಾಮಿಲಿ ಕುರಿತು ಹೊಸದಾಗಿ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಅವರೆಲ್ಲರೂ ಚಿರಪರಿಚಿತರಾಗಿದ್ದಾರೆ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಕೂಡ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವುದು ಗೊತ್ತೆ ಇದೆ. ಅಲ್ಲದೆ ಅವರು ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಪಡೆದಿದ್ದಾರೆ. ಆದರೆ ಒಂದೆ ತಿಂಗಳಿನಲ್ಲಿ ಮೆಗಾ ಬ್ರದರ್ಸ್ (Mega Brothers) ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಸಿನಿರಂಗದಲ್ಲಿ ಮಾಡಿರುವ ಸಾಧನೆಗಾಗಿ ವಿಶ್ವದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 156 ಚಿತ್ರಗಳು, 537 ಹಾಡುಗಳು ಮತ್ತು 24 ಸಾವಿರ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ಚಿರಂಜೀವಿ ಅವರಿಗೆ ಈ ಪ್ರಶಸ್ತಿ ನೀಡಿರುವುದು ಸಂತೋಷದ ವಿಚಾರವೇ ಆಗಿದೆ. ಇತ್ತ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಕಾರ್ಯವೈಖರಿಗೆ ವಿಶ್ವ ದಾಖಲೆ ಅವರಿಗೆ ಒಲಿದು ಬಂದಿದೆ.
ಹೌದು ಮೆಗಾ ಬ್ರದರ್ಸ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಒಂದೇ ತಿಂಗಳಿನಲ್ಲಿ ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗೆ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ.
ಪವನ್ ಕಲ್ಯಾಣ್ ಅವರು ಒಂದೇ ದಿನದಲ್ಲಿ 13 ಸಾವಿರಕ್ಕೂ ಹೆಚ್ಚು ಪಂಚಾಯತ್ ಗ್ರಾಮ ಸಭೆಗಳನ್ನು ನಡೆಸಿ ಕೆಲವೇ ದಿನಗಳಲ್ಲಿ ವಿಶ್ವದಾಖಲೆಯನ್ನು ಪಡೆದಿದ್ದಾರೆ.
ಮೆಗಾ ಬ್ರದರ್ಸ್ ಇಬ್ಬರೂ ಬ್ಯಾಕ್ ಟು ಬ್ಯಾಕ್ ವಿಶ್ವದಾಖಲೆಗಳನ್ನು ಸ್ವೀಕರಿಸುತ್ತಿರುವುದು ವಿಶೇಷವಾದ ಸಂಗತಿ ಎಂದೇ ಹೇಳಬಹುದು.(ಏಜೆನ್ಸೀಸ್)
ಸೋನಿಯಾ ಗಾಂಧಿ ವಿರುದ್ಧದ ಆರೋಪ ಸಾಬೀತುಪಡಿಸುವಂತೆ ಕಂಗನಾಗೆ ಸವಾಲು; ಸಚಿವ Vikramaditya Singh ಹೇಳಿದ್ದಿಷ್ಟು..