ಚೆನ್ನೈ: ದಕ್ಷಿಣ ಭಾರತದಲ್ಲಿನ ಪ್ರತಿಭಾವಂತ ನಟರಲ್ಲಿ ವಿಜಯ್ ಸೇತುಪತಿ(Vijay Sethupathi) ಒಬ್ಬರು ಎಂದರೆ ಅತಿಶಯೋಕ್ತಿ ಎನ್ನಿಸುವುದಿಲ್ಲ. ನಾಯಕನ ಪಾತ್ರದಿಂದ ಹಿಡಿದು ಖಳನಟನವರೆಗೆ ತಮ್ಮದೇ ಆದ ಛಾಪು ಮೂಡಿಸಿ ಸ್ಟಾರ್ ಪಟ್ಟ ಪಡೆದವರು ವಿಜಯ್ ಸೇತುಪತಿ. ಯಾವುದೇ ಪಾತ್ರವಾದರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ ಎಂದು ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ನಟ. ಇತರೆ ಹೀರೋಗಳಿಗಿಂತ ವಿಭಿನ್ನ ಎಂದರೆ ತಪ್ಪಗಲಾರದು. ಫಿಟ್ನೆಸ್-ಡಯಟ್ ಎಂದು ಫಾಲೋ ಮಾಡುವ ಸೆಲಿಬ್ರಿಟಿಗಳ ಮಧ್ಯೆ ವಿಜಯ್ ಸೇತುಪತಿ ಅವರ ಮಾತು ಕೇಳಿದ್ರೆ.. ಹೌದ ಎಂದೆನ್ನಿಸುತ್ತದೆ.
ಇದನ್ನು ಓದಿ: Tollywood | ಆ ಒಂದು ಅನುಭವಕ್ಕಾಗಿ ಕಾಯುತ್ತಿದ್ದೇನೆ; ನಿಶ್ಚಿತಾರ್ಥದ ಬಳಿಕ ಸೋಭಿತಾ ಧೂಳಿಪಾಲ ಬಿಚ್ಚಿಟ್ಟ ರಹಸ್ಯ
ಇತ್ತೀಚಿನ ಸಂದರ್ಶನವೊಂದರಲ್ಲಿ ಡಯಟ್,ಫಿಟ್ನೆಸ್ ಬಗ್ಗೆ ನಟ ವಿಜಯ್ ಸೇತುಪತಿ ಮುಕ್ತವಾಗಿ ಮಾತನಾಡಿದ್ದಾರೆ. ನಾನು ಡಯಟ್ ಕಾನ್ಸೆಪ್ಟ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಟೇಸ್ಟಿ ಫುಡ್ ತಿನ್ನುವುದು ಎಂದರೆ ಇಷ್ಟ. ಯಾವುದೇ ಮುಜುಗರವಿಲ್ಲದೆ ನಾನು ತಿನ್ನುತ್ತೇನೆ. ರುಚಿಯಾದ ಆಹಾರ ತಿನ್ನದಿದ್ದರೆ ನನ್ನ ಜೀವನವು ಸ್ವಾರಸ್ಯಕರವಾಗಿಲ್ಲ ಎಂದು ನನಗನ್ನಿಸುತ್ತದೆ. ಅದಕ್ಕಾಗಿಯೇ ನಾನು ಟೇಸ್ಟಿ ಆಹಾರ ಸವಿಯಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಇನ್ನು ಅದೇ ಸಂದರ್ಭದಲ್ಲಿ ಫಿಟ್ನೆಸ್ ಬಗ್ಗೆ ಮಾತನಾಡಿದ ಅವರು, ನಾನು ಕೂಡ ಸಾಮಾನ್ಯರಂತೆ. ವರ್ಕ್ಔಟ್ ಮಾಡುವುದೆಲ್ಲ ನನಗೆ ಆಗಿಬರುವುದಿಲ್ಲ. ನಾನು ವರ್ಕ್ಔಟ್ ಮಾಡಬೇಕು ಹಾಗೂ ಚಾಲೆಂಜ್ ತೆಗೆದುಕೊಳ್ಳಬೇಕು ಎಂದು ಅಂದುಕೊಳ್ಳತ್ತೇನೆ. ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ದಿನ ಅಂದುಕೊಳ್ಳುತ್ತೇನೆ. ಅಂದುಕೊಂಡಂತೆ ಒಂದು ವಾರ ಜಿಮ್ಗೆ ಹೋಗುತ್ತೇನೆ, ಯೋಗ ಮಾಡುತ್ತೇನೆ. ಒಂದು ವಾರವಷ್ಟೇ ನಾನು ಅದನ್ನು ಮಾಡುವುದು ಬಳಿಕ ನನಗೆ ಬೇಜಾರಾಗಿ ಬಿಟ್ಟುಬಿಡುತ್ತೇನೆ. ಸುಮಾರು ವರ್ಷಗಳಿಂದ ಹೀಗೆ ಆಗುತ್ತಿದೆ ಎಂದು ಹೇಳಿದರು.
ನಟ ವಿಜಯ್ ಸೇತುಪತಿ ಅವರಿಗೆ ಒಟಿಟಿ ಹಾಗೂ ಸಿನಿಜಗತ್ತಿನಲ್ಲಿ ಸಾಕಷ್ಟು ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ್ದ ‘ಮಹಾರಾಜ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೆ ಬಂದಿತ್ತು. ‘ಫರ್ಜಿ’ ಸೀರಿಸ್ ಹಾಗೂ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗಳನ್ನು ಮಾಡಿ ಅವರು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. (ಏಜೆನ್ಸೀಸ್)
ಕೃಷಿ ಕಾನೂನಿನ ಕುರಿತ ಹೇಳಿಕೆಗಳು ನನ್ನ ಸ್ವಂತ ಅಭಿಪ್ರಾಯ | Kangana Ranaut