

ಜೆಮ್‌ಶೆಡ್‌ಪುರ: ಯಾವುದೇ ತಾಯಿ ತನ್ನ ಮಗುವನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಸಾಧ್ಯವೇ? ಛತ್ತಿಸಗಢದ ಜೆಮ್ಶೆಡ್ಪುರದಲ್ಲಿ ಇಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಮಗುವನ್ನು 6000 ರೂ.ಗೆ ತಗೊಳ್ಳಿ ಎಂದು ಸಾರ್ವಜನಿಕವಾಗಿ ಕೂಗಿರುವ ಘಟನೆ ನಡೆದಿದೆ.
ಈ ಅಸಹಾಯಕ ತಾಯಿಯ ಕಥೆ ಮುನ್ನೆಲೆಗೆ ಬಂದಾಗ ಇಡೀ ಸಮಾಜವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದು, ಜಮ್ಶೆಡ್‌ಪುರದ ಬಾಗ್‌ಬೇಡ ಟ್ರಾಫಿಕ್ ಕಾಲೋನಿಯಲ್ಲಿ ಮಹಿಳೆ ಮಗುವಿನ ಮಾರಾಟವ ಮಾಡಲು ಸಾರ್ವಜನಿಕವಾಗಿ ಕೂಗತೊಡಿದ್ದಳು. ಕೂಡಲೇ ಸ್ಥಳೀಯರು ಮಹಿಳೆಯೊಬ್ಬಳು ಕೇವಲ 2 ತಿಂಗಳ ನವಜಾತ ಶಿಶುವನ್ನು ಮಾರಾಟ ಮಾಡುತ್ತಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಮಗುವನ್ನು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಈ ಅಸಹಾಯಕ ತಾಯಿಯ ಕಥೆ ಏನು?
ಪೊಲೀಸರಿಗೆ ಸಿಕ್ಕಿಬಿದ್ದ ಮಹಿಳೆ ತಾನು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಬಲರಾಮ್‌ಪುರ ನಿವಾಸಿ ಎಂದು ಹೇಳಿದ್ದು, ಸುಮಾರು 2 ತಿಂಗಳ ಹಿಂದೆ ಜೆಮ್‌ಶೆಡ್‌ಪುರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಗಿಯೂ ಈ ಮಗು ತನ್ನ ಪ್ರಿಯಕರನಿಂದಾಗಿ ಜನಿಸಿದೆ ಎಂದು ಹೇಳಿದ್ದಾಳೆ. ಆ ಬಳಿಕ ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಸಮೀಪದ ಬಸ್ ನಿಲ್ದಾಣದ ಬಳಿ ವಾಸಿಸಲು ಪ್ರಾರಂಭಿಸಿದ್ದಳು.
ಈ ವೇಳೆ ಪ್ರಯಾಣಿಕರು ಮತ್ತು ಸ್ಥಳೀಯ ಜನರು ಆಹಾರವನ್ನು ನೀಡಿದ್ದು, ಆಕೆ ಅಲ್ಲಿಯೇ ಬದುಕುವುದನ್ನು ಮುಂದುವರೆಸಿದ್ದಳು. ಆದರೆ ಬದುಕಲು ಇಷ್ಟು ಆಹಾರ ಸಾಕಾಗುವುದಿಲ್ಲ ಎಂದು ಭಾವಿಸಿದ ಮಹಿಳೆಯು, ಅಪೌಷ್ಟಿಕತೆಯಿಂದ ನರಳುತ್ತಿರುವ ತನ್ನ ಮುಗ್ಧ ಮಗುವಿನ ಮುಖವನ್ನು ಕಣ್ಣೀರಿಟ್ಟಿದ್ದಾಳೆ. ಕೊನೆಗೆ ಮಗುವನ್ನು ಮಾರಿದರೆ ಯಾವುದಾದರೂ ಮನೆಗೆ ಹೋಗಿ ಚೆನ್ನಾಗಿ ಬೆಳೆಯುತ್ತಾನೆ ಎಂದುಕೊಂಡು ಮಾರಾಟ ಮಾಡಲು ಯತ್ನಿಸಿದ್ದಾಳೆ. ಇನ್ನು, ಸ್ಥಳೀಯ ಪೊಲೀಸರು ಪಶ್ಚಿಮ ಬಂಗಾಳದ ಪುರುಲಿಯಾ ಪೊಲೀಸರನ್ನು ಸಂಪರ್ಕಿಸಿ ಮಹಿಳೆ ಮತ್ತು ಆಕೆಯ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.(ಏಜೆನ್ಸೀಸ್)