2007ರಲ್ಲಿ ಬ್ಲಾಕ್​ಬಸ್ಟರ್​ 'ಜಬ್​ ವಿ ಮೆಟ್'​; ಅದೇ ವರ್ಷದಲ್ಲಿ ಕರೀನಾ-ಶಾಹೀದ್​ ಬ್ರೇಕ್ಅಪ್​! ಈಗ ಚಿತ್ರದ ಸೀಕ್ವೆಲ್​??

WhatsApp Image 2024-04-02 at 1.20.27 PM
Published on

ಮುಂಬೈ: ಬಾಲಿವುಡ್​ ಸಿನಿಮಾಗಳು ಅತ್ಯಂತ ಯಶಸ್ವಿಯಾದ ಕಾಲಘಟ್ಟಗಳಲ್ಲಿ 2007ನೇ ವರ್ಷ ಕೂಡ ಒಂದು. ಈ ವರ್ಷದಲ್ಲಿ ಹಲವು ಚಿತ್ರಗಳು ಸಿನಿಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆಗಳನ್ನು ಗಳಿಸುವ ಮೂಲಕ ಬ್ಲಾಕ್​ಬಸ್ಟರ್​ ಸಿನಿಮಾಗಳಾಗಿ ಹೊರಹೊಮ್ಮಿತು. ಆ ಸಾಲಿನಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದ 'ಜಬ್ ವಿ ಮೆಟ್' ಚಿತ್ರವು​​ ಸಹ ಮೆಗಾ ಹಿಟ್ ಚಿತ್ರವಾಗಿ ಭಾರಿ ಯಶಸ್ಸನ್ನು ಗಳಿಸಿತು.

'ಜಬ್ ವಿ ಮೆಟ್' ಭಾರತೀಯ ಚಿತ್ರರಂಗದ ಬ್ಲಾಕ್​ಬಸ್ಟರ್​​ ಹಿಟ್‌ಗಳಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಶಾಹೀದ್ ಕಪೂರ್​ ನಾಯಕ-ನಾಯಕಿಯಾಗಿ ತೆರೆ ಮೇಲೆ ಮೋಡಿ ಮಾಡಿದ್ದರು. ಈ ಸಿನಿಮಾಗೂ ಮುನ್ನ ಹಲವು ಚಿತ್ರಗಳಲ್ಲಿ ಇವರಿಬ್ಬರ ಜೋಡಿ ನೋಡುಗರನ್ನು ಸೆಳೆದಿತ್ತು. ಇಬ್ಬರ ನಡುವೆ ಪ್ರೀತಿಯೂ ಮೂಡಿತ್ತು. ಇಮ್ತಿಯಾಜ್ ಅಲಿ ನಿರ್ದೇಶನದ ಜಬ್​ ವಿ ಮೆಟ್​ ಚಿತ್ರ ತೆರೆಕಂಡಿದ್ದೇ ತಡ ಇಬ್ಬರ ಮಧ್ಯೆಯಿದ್ದ ಪ್ರೀತಿ ಬ್ರೇಕ್​ಅಪ್​ನಲ್ಲಿ ಅಂತ್ಯ ಕಂಡಿತು.

ಚಿತ್ರದ ಸಕ್ಸಸ್ ಸುದ್ದಿ​ ಒಂದೆಡೆಯಾದರೆ, ಅದೇ ಸಮಯದಲ್ಲಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬ್ರೇಕ್​ಅಪ್​ ಸುದ್ದಿ ಮತ್ತೊಂದೆಡೆ. ಇಬ್ಬರು ತಮ್ಮ ಡೇಟಿಂಗ್​ ವದಂತಿಗಳಿಗೆಲ್ಲಾ ತೆರೆಎಳೆದರು. ಬಾಲಿವುಡ್​ನ ಈ ಚಿತ್ರವನ್ನು ಅನೇಕರು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಾರೆ. ಹಲವು ವರ್ಷಗಳು ಕಳೆದರೂ ಚಿತ್ರದ ಥ್ರಿಲ್​ ಮಾತ್ರ ಕಡಿಮೆಯಾಗಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡ ನಿರ್ದೇಶಕರು ಇದೀಗ ಸಿನಿಮಾದ ಮುಂದುವರಿದ ಭಾಗವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಸದ್ಯದಲ್ಲೇ ಈ ಐಕಾನಿಕ್ ಹಿಟ್ ಕ್ಲಾಸಿಕ್ ಆಗಲಿದೆ ಎಂಬುದು ಚಿತ್ರರಂಗದ ಮೂಲಗಳಿಂದ ಕೇಳಿಬರುತ್ತಿರುವ ಮಾತು. ಸ್ವತಃ ಇಮ್ತಿಯಾಜ್ ಅಲಿ ಅವರೇ ಈ ಬಗ್ಗೆ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ. 'ಜಬ್ ವಿ ಮೆಟ್​ 2' ಚಿತ್ರದಲ್ಲಿ ಶಾಹಿದ್ ಅಥವಾ ಕರೀನಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಾರೆಯೇ? ಅಥವಾ ಬೇರೆ ಕಲಾವಿದರು ನಟಿಸುತ್ತಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net