More

    ಏಪ್ರಿಲ್ 2-6ರವರೆಗೆ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಬಿಸಿಲ ಬೇಗೆಯ ಮಧ್ಯೆ ಐಎಂಡಿ ಮುನ್ಸೂಚನೆ

    ದೇಶದಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಜನರು ಹೈರಾಣಾಗುತ್ತಿದ್ದಾರೆ. ದೇಶವ್ಯಾಪಿ ನಾನಾ ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆಯ ಮಧ್ಯೆ ಮೊದಲ ವರ್ಷಧಾರೆ ಸುರಿದಿದ್ದು, ಇದೇ ಏಪ್ರಿಲ್ 2ರಿಂದ ಒಡಿಶಾದ ಹಲವಾರು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಸಂಭಾವ್ಯ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭುವನೇಶ್ವರದಲ್ಲಿನ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ಕೇಂದ್ರ ಮಾಹಿತಿ ಹಂಚಿಕೊಂಡಿದೆ.

    ಇದನ್ನೂ ಓದಿ: ದಿಲ್ಲಿ ಅಬಕಾರಿ ನೀತಿಯ ಘಾಟು: ಕ್ರೇಜಿವಾಲ್​ಗೆ ಏ.15ರವರೆಗೆ ನ್ಯಾಯಾಂಗ ಬಂಧನ

    ಗರಿಷ್ಠ ತಾಪಮಾನದಲ್ಲಿ ನಿರೀಕ್ಷಿತ ಏರಿಕೆ ಮತ್ತು ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಯ ಕಾರಣದಿಂದ ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಪರಿಣಾಮ, ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗೆ ರಾಜ್ಯದಾದ್ಯಂತ ಬಿಸಿ ಮತ್ತು ಆರ್ದ್ರ ವಾತಾವರಣವು ಕಂಡುಬರುವ ನಿರೀಕ್ಷೆಯಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

    ಈ ಮುನ್ಸೂಚನೆಯು ಉತ್ತರ ಛತ್ತೀಸ್‌ಗಢ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಚಂಡಮಾರುತದ ಪ್ರಭಾವ ಇರಲಿದೆ. ಇದು ಹಿಂದೆ ಹವಾಮಾನದ ಮಾದರಿಗಳ ಮೇಲೆ ಪ್ರಭಾವ ಬೀರಿದೆ, ಭುವನೇಶ್ವರದಲ್ಲಿ ಈ ವಾರ ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

    ಇದನ್ನೂ ಓದಿ: ‘ಬಡವರಿಗೆ ವಿಸ್ಕಿ, ಬಿಯರ್ ನೀಡ್ತೇನೆ’: ಸ್ವತಂತ್ರ ಅಭ್ಯರ್ಥಿಯಿಂದ ಹೀಗೊಂದು ಚುನಾವಣಾ ಭರವಸೆ..!

    ಇದೆಲ್ಲದರ ನಡುವೆ ಹವಾಮಾನ ಇಲಾಖೆ ಭಾನುವಾರ ‘ಆರೆಂಜ್ ಅಲರ್ಟ್’ ಹೊರಡಿಸಿದ್ದು, ಮುಂದಿನ ಐದು ದಿನಗಳಲ್ಲಿ ಈಶಾನ್ಯದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹೇಳಿದೆ,(ಏಜೆನ್ಸೀಸ್).

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts