24 ಗಂಟೆಗಳಲ್ಲಿ 450 ಹಮಾಸ್​ ಕೇಂದ್ರಗಳ ಮೇಲೆ ಗುರಿ ಇಟ್ಟ ಇಸ್ರೇಲ್​; ಹಮಾಸ್​ ಮಿಲಿಟರಿ ಕಂಪೌಂಡ್ ವಶಕ್ಕೆ..

IDF
Published on

ಗಾಜಾ ಬಾರ್ಡರ್​: ಇಸ್ರೇಲ್​ನಲ್ಲಿ ಕಳೆದ 24 ಗಂಟೆಗಳಲ್ಲಿ 450 ಹಮಾಸ್ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಗಾಜಾ ಪಟ್ಟಿಯಲ್ಲಿನ ಹಮಾಸ್ ಮಿಲಿಟರಿ ಕಂಪೌಂಡನ್ನು ಇಸ್ರೇಲ್ ರಕ್ಷಣಾ ಪಡೆ ನಿಯಂತ್ರಣಕ್ಕೆ ಪಡೆದಿದೆ.

ಇಸ್ರೇಲ್ ರಕ್ಷಣಾ ಪಡೆದ ನಿನ್ನೆ 24 ಗಂಟೆಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಸುರಂಗ, ಉಗ್ರರ ನೆಲೆ, ಮಿಲಿಟರಿ ವ್ಯವಸ್ಥೆ, ನಿಗಾ ಕೇಂದ್ರ, ಆ್ಯಂಟಿ ಟ್ಯಾಂಕ್ ಮಿಸೈಲ್ ಲಾಂಚ್​ ಸೇರಿದಂತೆ ಹಮಾಸ್​ಗೆ ಸೇರಿದ 450 ಕೇಂದ್ರಗಳ ಮೇಲೆ ದಾಳಿ ನಡೆಸಿದೆ.

ಮಾತ್ರವಲ್ಲದೆ, ಗಾಜಾದಲ್ಲಿನ ಹಮಾಸ್ ಮಿಲಿಟರಿ ಕಂಪೌಂಡ್​ ವಶಕ್ಕೆ ಪಡೆದುಕೊಂಡ ಬಗ್ಗೆಯೂ ಇಸ್ರೇಲ್ ರಕ್ಷಣಾ ಪಡೆ ಘೋಷಣೆ ಮಾಡಿದೆ. ಈ ಕಂಪೌಂಡ್ ನಿಗಾ ಕೇಂದ್ರ, ತರಬೇತಿ ಪ್ರದೇಶ ಮತ್ತು ಸುರಂಗಗಳನ್ನು ಒಳಗೊಂಡಿದೆ ಎಂದು ಅದು ಹೇಳಿದೆ.

ಒಂದು ತಿಂಗಳ ಹಿಂದೆ ಅಂದರೆ ಅ. 7ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ ಭೀಕರ ದಾಳಿ ನಡೆಸಿದ್ದು, ಇಸ್ರೇಲ್ ಪ್ರತೀಕಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ರಣಭೀಕರ ಪರಿಸ್ಥಿತಿ ಉಂಟಾಗಿದೆ. ದಾಳಿ ಆರಂಭವಾಗಿ ಒಂದು ತಿಂಗಳಾಗುತ್ತ ಬಂದರೂ ಅಲ್ಲಿನ ರಣಭೀಕರ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net