

Massive Attack:ಇರಾನಿನ ಆರು ಮಿಲಿಟರಿ ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದ್ದು, 15 ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDS) ಸೋಮವಾರ ಹೇಳಿಕೊಂಡಿದೆ.
ತಮ್ಮ ಸೇನೆಯಿಂದ ನಾಶವಾದ ಜೆಟ್‌ಗಳು ತಮ್ಮ ವಿಮಾನಗಳ ವಿರುದ್ಧ ಬಳಸಲು ಮತ್ತು ಇರಾನಿನ ಪ್ರದೇಶದ ಮೇಲೆ ಇಸ್ರೇಲ್‌ನ ದಾಳಿಯನ್ನು ತಡೆಯಲು ಉದ್ದೇಶಿಸಲಾಗಿತ್ತು ಎಂದು IDS ಹೇಳಿಕೊಂಡಿದೆ.
ನಾಶವಾದ ಜೆಟ್‌ಗಳಲ್ಲಿ ಇರಾನಿನ ಮಿಲಿಟರಿಗೆ ಸೇರಿದ F-14, F-5 ಮತ್ತು AH-1 ವಿಮಾನಗಳು ಸೇರಿವೆ. ನಮ್ಮ ಸೇನೆಯದಾಳಿಯಿಂದಾಗಿ ಇರಾನಿನ ಮಿಲಿಟರಿ ವಿಮಾನ ನಿಲ್ದಾಣಗಳು ಮತ್ತು ಭೂಗತ ರನ್‌ವೇಗಳನ್ನು ಹಾನಿಗೊಳಿಸಿವೆ ಎಂದು ಹೇಳಿಕೊಂಡಿದೆ.
"ಇರಾನ್ ಆಡಳಿತದ ಮಿಲಿಟರಿ ಸಾಮರ್ಥ್ಯಗಳ ಮೇಲೆ ಐಡಿಎಫ್ ತನ್ನ ದಾಳಿಯನ್ನು ತೀವ್ರಗೊಳಿಸುತ್ತಲೇ ಇದೆ ಮತ್ತು ಇಸ್ರೇಲ್ ರಾಜ್ಯದ ಭದ್ರತೆಯನ್ನು ಕಾಪಾಡಿಕೊಳ್ಳಲು ವಾಯು ಶ್ರೇಷ್ಠತೆಯನ್ನು ಸಾಧಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" IDS ಹೇಳಿಕೊಂಡಿದೆ.
ಇನ್ನು ಶನಿವಾರ ಬೆಳ್ಳಂ ಬೆಳಗ್ಗೆ ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿ, ಯಶಸ್ವಿಯಾಗಿ ನಾಶಪಡಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ್ದಾರೆ.(ಏಜೆನ್ಸೀಸ್)