‘ವಿಮಾನ ಹಾರಿಸಲು ಯೋಗ್ಯವಿಲ್ಲ ಚಪ್ಪಲಿ ಹೊಲಿಯಿರಿ’ ಎಂಬ ಆರೋಪ; ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಎಫ್‌ಐಆರ್| indigo-pilot

indigo
Published on

ನವದೆಹಲಿ: ಕೆಲಸದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇಂಡಿಗೋದ ತರಬೇತಿ ಪೈಲಟ್ ಒಬ್ಬರು, ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಮೊದಲು ತರಬೇತಿ ಪೈಲಟ್‌ ಬೆಂಗಳೂರಿನಲ್ಲಿ ದೂರು ನೀಡಿದ್ದರು. ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಬೆಂಗಳೂರು ಪೊಲೀಸರು ಇದೀಗ ಈ ಪ್ರಕರಣವನ್ನು ಇಂಡಿಗೋದ ಪ್ರಧಾನ ಕಚೇರಿ ಇರುವ ಗುರುಗ್ರಾಮ್ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಇಂಡಿಗೋ ವಿಮಾನದ ಪೈಲಟ್‌ ಒಬ್ಬರಿಗೆ ಕೆಲಸದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ. ಇಂಡಿಗೋದ ತರಬೇತಿ ಪೈಲಟ್ ಒಬ್ಬರು, ಮೂವರು ಹಿರಿಯ ಅಧಿಕಾರಿಗಳು ತನ್ನ ಜಾತಿಯನ್ನು ಅವಮಾನಿಸಿದ್ದಾರೆ ಹಾಗೂ ವಿಮಾನ ಹಾರಿಸಲು ನೀನು ಯೋಗ್ಯನಲ್ಲ ಹೋಗಿ ಬೂಟುಗಳನ್ನು ಹೊಲಿ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ತರಬೇತಿ ಪೈಲಟ್ ದೂರಿನಲ್ಲಿ ಹೇಳಿದ್ದೇನು.?

(ಏಜೆನ್ಸೀಸ್)

ಏಪ್ರಿಲ್ 28 ರಂದು ಇಂಡಿಗೊದ ಗುರುಗ್ರಾಮ್ ಕಚೇರಿಯಲ್ಲಿ ನಡೆದ ಸಭೆಯನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ನೀವು ವಿಮಾನ ಹಾರಿಸಲು ಯೋಗ್ಯರಲ್ಲ ಹೋಗಿ ನಿಮ್ಮ ಮೂಲ ಕಸುಬು ಚಪ್ಪಲಿ ಹೊಲಿಯಿರಿ. ನೀವು ಇಲ್ಲಿ ಕಾವಲುಗಾರನಾಗಲು ಸಹ ಅರ್ಹರಲ್ಲ ಎಂದು ಎಲ್ಲರೆದುರು ಅವಮಾನ ಮಾಡಿದ್ದಾರೆ. ತನಗೆ ಕಿರುಕುಳ ನೀಡಿದ್ದು, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net