ಇರಾನ್​​​ ಪರಮಾಣು ಸ್ಥಾವರಗಳ ಮೇಲೆ ಟ್ರಂಪ್​​ ಬಾಂಬ್​​: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಸರ್ವೋಚ್ಚ ನಾಯಕ ಖಮೇನಿ | Iran

dk - 2025-06-23T114859.338
Published on

Iran: ಇರಾನ್​​ನ ಪರಮಾಣು ಸೌಲಭ್ಯ ಮೇಲೆ ಅಮೆರಿಕ 'ಆಪರೇಷನ್​​ ಮಿಡ್​​ನೈಟ್​ ಹ್ಯಾಮರ್​' ಹೆಸರಿನ ಕಾರ್ಯಚರಣೆಯ ಮೂಲಕ ದಾಳಿ ಮಾಡಿದ್ದು, ಇರಾನ್​​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕಕ್ಕೆ ಕಠಿಣ ಮತ್ತು ನಿರ್ಣಾಯಕ ಪ್ರತಿಕ್ರಿಯೆಯ ಎಚ್ಚರಿಕೆ ನೀಡಿದ ಖಮೇನಿ, ಶತ್ರುಗಳು ತಮ್ಮ ಅಜಾಗರೂಕ ಪ್ರಚೋದನೆಗಾಗಿ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಖಮೇನಿ, ''ಶಿಕ್ಷೆ ಮುಂದುವರೆದಿದೆ. ಝಿಯೋನಿಸ್ಟ್ ಶತ್ರು ದೊಡ್ಡ ತಪ್ಪು ಮಾಡಿದ್ದಾನೆ. ದೊಡ್ಡ ಅಪರಾಧ ಮಾಡಿದ್ದಾನೆ, ಅದನ್ನು ಶಿಕ್ಷಿಸಬೇಕು ಮತ್ತು ಅದನ್ನು ಶಿಕ್ಷಿಸಲಾಗುತ್ತೆ'' ಎಂದು ಅಮೆರಿಕ ಮೇಲೆ ಮರು ದಾಳಿ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ದಾಳಿಯನ್ನು ಖಂಡಿಸಿ, ಇರಾನ್ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿ ಅಪಾಯಕಾರಿ ತಿರುವು ಎಂದು ಹೇಳಿದ್ದಾರೆ.

ಇರಾನ್‌ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್‌ನ 3 ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿ, ಯಶಸ್ವಿಯಾಗಿ ನಾಶಪಡಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net