ಬೈರುತ್​​ ಮೇಲೆ Israel​ ವೈಮಾನಿಕ ದಾಳಿ; 22 ಮಂದಿ ಸಾವು, ಹಲವರು ಗಂಭೀರ

central beirut
Published on

ನವದೆಹಲಿ: ಮಧ್ಯ ಬೈರುತ್​ (Central Beirut) ಮೇಲೆ ಇಸ್ರೇಲ್ (Israel)​ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Air Strike) 22 ಮಂದಿ ಮೃತಪಟ್ಟಿದ್ದು, 120ಕ್ಖೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್​ (Israel) ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ (Hezbollah) ಸಂಘಟನೆಯ ಟಾಪ್​ ಮೋಸ್ಟ್ ಕಮಾಂಡರ್(Commander)​ ಎಸ್ಕೇಪ್​ ಆಗಿದ್ದಾರ ಎಂದು ವರದಿಯಾಗಿದೆ.

ಮಧ್ಯ ಬೈರುತ್​ ಮೇಲೆ ಏಕಕಾಲದಲ್ಲಿ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆ (Israel Army) ದಾಳಿ ನಡೆಸಿದೆ. ವೈಮಾನಿಕ ದಾಳಿಯಲ್ಲಿ ಎಂಟು ಅಂತಸ್ತಿನ ಕಟ್ಟಡವನ್ನು ದ್ವಂಸಗೊಂಡಿದ್ದು, ಹಿಜ್ಬುಲ್ಲಾದ ಟಾಪ್​ ಮೋಸ್​ ಕಮಾಂಡರ್​ ವಫೀಕ್ ಸಫಾ (Wafiq Safa) ಎಸ್ಕೇಪ್​ ಆಗಿದ್ದು, ಈ ವರದಿಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೇಲ್​ ಸೇನೆ ತಿಳಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಇಸ್ರೇಲ್​ (Israel) ನಡೆಸಿದ ಭೀಕರ ದಾಳಿಗಳಲ್ಲಿ ಇದು ಒಂದಾಗಿದ್ದು, ಮೂರನೇ ವಿಶ್ವಯುದ್ಧಕ್ಕೆ (Third World War) ನಾಂದಿ ಹಾಡಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನನ್ನ ಹೊಡೆದುರುಳಿಸಿದ ನಂತರ ಉನ್ನತ ಅಧಿಕಾರಿಗಳ ಸರಣಿ ಹತ್ಯೆಯನ್ನೇ ಹೆಚ್ಚಾಗಿ ಗುರಿಯಾಗಿಸಿದೆ. ಆದ್ರೆ ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತಾಧಿಕಾರಿ ಬದುಕುಳಿದಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಸ್ಪೇನ್‌ ಹಾಗೂ ಇಟಲಿ ದೇಶಗಳು ಆರೋಪಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net