ಜೈಪುರ: ಶಾಲೆಗಳು ವಿದ್ಯಾರ್ಥಿಗಳ ಪಾಲಿಗೆ ದೇವಾಲಯವಿದ್ದಂತೆ ಶಿಕ್ಷಕರು (Teacher) ದೇವರಿದ್ದಂತೆ. ವಿದ್ಯಾರ್ಥಿಗಳಿಗೆ (Students) ತಿದ್ದಿ ಬುದ್ದಿ ಹೇಳಿ ಮಾದರಿಯಾಗಬೇಕಿರುವ ಶಿಕ್ಷಕರೇ ದಾರಿ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಕರ್ತವ್ಯಕಲೋಪದ ಫೋಟೋ (Photo) ಹಾಗೂ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಇದೇ ರೀತಿಯ ನಾಚಿಕೆಗೇಡಿನ ಘಟನೆಯೊಂದು ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದ್ದು, ಶಿಕ್ಷಕಿಯ (Teacher) ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಶಿಕ್ಷಕಿಯೊಬ್ಬರು ತರಗತಿಯೊಳಗೆ (ClassRoom) ವಿದ್ಯಾರ್ಥಿಗಳಿಂದ ಮಸಾಜ್ (Massage) ಮಾಡಿಸಿಕೊಂಡಿರುವ ಘಟನೆ ನಡೆದಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ (Students Future) ಏನಾಗಬೇಡ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
स्कूल टीचर का वीडियो हुआ वायरल. pic.twitter.com/ReTUYkEPoj
— Prashant rai (@prashantrai280) October 10, 2024
ಇದನ್ನೂ ಓದಿ: Pak ಆತಿಥ್ಯದಲ್ಲಿ Champions Trophy ನಡೆಯೋದು ಡೌಟ್? ಬದಲಿ ತಾಣಗಳನ್ನುಆಯ್ಕೆ ಮಾಡಿದ ICC
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ತರಗತಿಯಲ್ಲಿ ನೆಲದ ಮೇಲೆ ಮಲಗಿಕೊಂಡಿರುವ ಶಿಕ್ಷಕಿಯೊಬ್ಬರು (Teacher) ವಿದ್ಯಾರ್ಥಿಗಳಿಂದ (Student) ಮಸಾಜ್ (Massage) ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವೇಳೆ ಬೇರೆ ಶಿಕ್ಷಕಿಯೊಬ್ಬರಿದದು, ಅವರು ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿಯ ನಡೆಗೆ ಕಿಡಿಕಾರಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತಪ್ಪು ಯಾರೇ ಮಾಡಿದ್ದರು ಅಂತಹವರನ್ನು ಸುಮ್ಮನೇ ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.