

ಮುಂಬೈ: ನವೆಂಬರ್ 26ರಿಂದ ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಗೆ ಈಗಾಗಲೆ ಉಭಯ ತಂಡಗಳು ತಯಾರಿ ನಡೆಸುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (World Test Championship) 2023-25ರ ಅಡಿಯಲ್ಲಿ ಈ ಟೆಸ್ಟ್ ಸರಣಿ (Test Series) ನಡೆಯಲಿದೆ. ಆದರೆ, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇದೀಗ ವಿಚಾರ ಒಂದು ಹೊರಬಿದ್ದಿದ್ದು, ಈ ವಿಚಾರ ಟೀಮ್ ಇಂಡಿಯಾವನ್ನು (Team India) ಚಿಂತೆಗೆ ದೂಡಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೋಹಿತ್ ಶರ್ಮ (Rohit Sharma) ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (Test Series) ಮೊದಲೆರಡು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಕಾರಣಗಳನ್ನು (Personal Reasons) ನೀಡಿ ಅವರು ಸರಣಿಯ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿದ್ದು, ಇದು ಟೀಮ್ ಇಂಡಿಯಾವನ್ನು (Team India) ಚಿಂತೆಗೆ ದೂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ರೋಹಿತ್ (Rohit Sharma) ಸರಣಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಬಹುದು. ಆದರೆ, ಈ ಬಗ್ಗೆ ನಮಗೆ ಇನ್ನೂ ನಿಶ್ಚಿತ ಮಾಹಿತಿ ದೊರೆತಿಲ್ಲ. ಸರಣಿ ಆರಂಭಕ್ಕೂ ಮುನ್ನ ಒಂದು ವೇಳೆ ಅವರ ಕೆಲಸ ಮುಗಿದಲ್ಲಿ ಎಲ್ಲಾ ಐದು ಪಂದ್ಯಗಳನ್ನು ರೋಹಿತ್ ಆಡಲಿದ್ದಾರೆ ಎಂದು ಬಿಸಿಸಿಐ (BCCI) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೋಹಿತ್ ಬದಲಿಗೆ ತಂಡದಲ್ಲಿ ಅಭಿಮನ್ಯು ಈಶ್ವರನ್ (Abhimanyu Eshwaran) ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಸರಣಿಯ (Series) ಮೊದಲೆರಡು ಪಂದ್ಯಗಳನ್ನು ಕೆ.ಎಲ್. ರಾಹುಲ್ (KL Rahul) ಅಥವಾ ಶುಭಮನ್ ಗಿಲ್ (Shubman Gill) ಮುನ್ನಡೆಸಬಹುದು ಎಂದು ಹೇಳಲಾಗಿದ್ದು, ಅಂತಿಮವಾಗಿ ಸರಣಿ ಆರಂಭಕ್ಕೂ ಮುನ್ನ ಈ ಬಗ್ಗೆ ತಿಳಿದು ಬರಲಿದೆ.