ಕೇರಳದಲ್ಲಿ ಕಮಾಲ್​ ಮಾಡಿದ ಕನ್ನಡಿಗ; 25 ಕೋಟಿ ರೂ. Lottery ಗೆದ್ದ ಮಂಡ್ಯದ ಗಂಡು

Kerala Lottery
Published on

ಮಂಡ್ಯ: ಮನುಷ್ಯನಿಗೆ ಅದೃಷ್ಟ (Luck) ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಸಾಮಾನ್ಯ ವ್ಯಕ್ತಿಗಳಿಗೆ ಲಾಟರಿಯಲ್ಲಿ (Lottery) ಬಂಪರ್​ ಹೊಡೆದಾಗ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಂಡಿರುತ್ತೇವೆ. ಆದರೆ, ಅದೆಲ್ಲಾ ಕಾಲದ ಮಹಿಮೆ ಎಂದರೆ ತಪ್ಪಾಗಲಾರದು. ಇದೀಗ ಅಂಥಹದ್ದೆ ಮಹಿಮೆಯೊಂದು ಮಂಡ್ಯ ಜಿಲ್ಲೆ (Mandya District) ಪಾಂಡವಪುರ (Pandavapura) ನಿವಾಸಿ ಬದುಕಲ್ಲಿ ನಡೆದಿದ್ದು, ಲಕ್​ (Luck) ಎಂದರೆ ಇದಪ್ಪಾ ಎಂದು ನೀವು ಹೇಳುವುದರಲ್ಲಿ ಯಾವದೇ ಸಂಶಯ ಬೇಡ.

ಕೇರಳದ ಲಾಟರಿಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಸ್ಕೂಟರ್​ ಮೆಕ್ಯಾನಿಕ್​ ಅಲ್ತಾಫ್​ (Altaf) ಪಾಲಾಗಿದ್ದು, ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಲಾಟರಿಯನ್ನು (Lottery) ಗೆದ್ದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ಕೇರಳಕ್ಕೆ ತೆರಳಿದ್ದ ಅಲ್ತಾಫ್​ 500 ರೂ ಕೊಟ್ಟು ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್​ ಖರೀದಿ ಮಾಡಿದ್ದ ಲಾಟರಿ ಟಿಕೆಟ್​ಗೆ ಬಂಪರ್​ ಬಹುಮಾನ ಬಂದಿದ್ದು, ತೆರಿಗೆ (Tax) ಕಳೆದು ಅಲ್ತಾಫ್​ಗೆ 17.5 ಕೋಟಿ ರೂ. ಮೊತ್ತ ಸಿಗಲಿದೆ. ಬಹುಮಾನದ ಹಣ ತರಲು ಅಲ್ತಾಫ್​ ಹಾಗೂ ಕುಟುಂಬಸ್ಥರು ಕೇರಳಕ್ಕೆ ದೌಡಾಯಿಸಿದ್ದು, ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್​ ಕೋಟ್ಯಾಧಿಪತಿಯಾಗಿದ್ದಾರೆ.

ಪ್ರತಿ ವರ್ಷ ಓಣಂ (Onam) ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುವ ರಾಜ್ಯ ಲಾಟರಿಯ ಲಕ್ಕಿ ಡ್ರಾ ರಿಸಲ್ಟ್ (Lucky Draw Result)​ ಅಕ್ಟೋಬರ್ 09ರಂದು ಪ್ರಕಟವಾಗಿದ್ದು, ಇದರಲ್ಲಿ ಅಲ್ತಾಫ್​ ಮಾತ್ರವಲ್ಲದೇ. ಓಣಂ ತಿರುಓಣಂ ಬಂಪರ್ ಬಿಆರ್ 99 ಹೆಸರಿನಲ್ಲಿ ಈ ಲಾಟರಿಯನ್ನು ನಡೆಸಲಾಗುತ್ತದೆ. ಈ ಬಾರಿ 71,35,938 ಟಿಕೆಟ್​ಗಳು ಮಾರಾಟವಾಗಿದ್ದವು. ಪಾಲಕ್ಕಾಡ್​ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್​ಗಳು ಮಾರಟವಾಗಿದ್ದವು.

ಲಾಟರಿಯಲ್ಲಿ (Lottery) ಗೆದ್ದವರಿಗೆ ಮೊದಲ ಬಹುಮಾನವಾಗಿ 25 ಕೋಟಿ ರೂ. ಸಿಗಲಿದ್ದು, 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂ. ಹಾಗೂ 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಮೂರನೇ ಬಹುಮಾನಗಳು ಘೋಷಣೆಯಾದ ಬಳಿಕ 20 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇನ್ನು 4ನೇ ಶ್ರೇಣಿಯ ಬಹುಮಾನಗಳಡಿ 5 ಲಕ್ಷ, 5ನೇ ಶ್ರೇಣಿಯಲ್ಲಿ 2 ಲಕ್ಷ ರೂ., 6ನೇ ಶ್ರೇಣಿಯ ಬಹುಮಾನದಡಿ 5 ಸಾವಿರ ರೂ., 7ನೇ ಶ್ರೇಣಿಯಡಿ 1,000 ರೂ., 8ನೇ ಶ್ರೇಣಿಯಡಿ 1 ಸಾವಿರ ರೂ., 9ನೇ ಶ್ರೇಣಿಯಡಿ 500 ರೂ.ಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಬಹುಮಾನಗಳ ಒಟ್ಟು ಮೊತ್ತ 125.54 ಕೋಟಿ ರೂ. ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net