ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 86 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಟೆಸ್ಟ್ ಮಾದರಿಯಂತೆ ಟಿ20 ಸರಣಿಯನ್ನು (T20 Series) ವಶಪಡಿಸಿಕೊಂಡಿದೆ. ಪಾಕಿಸ್ತಾನದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದ ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ಬಗ್ಗುಬಡಿದ ಸೂರ್ಯಕುಮಾರ್ (Suryakumar) ಪಡೆ ಮುಂಬರುವ ಸರಣಿಗಳಿಗೆ ಭರ್ಜರಿ ತಯಾರಿ ನಡೆಸುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ (Team India) ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಈ ವೇಳೆ ಜತೆಯಾದ ಬ್ಯಾಟರ್ಗಳಾದ ನಿತೀಶ್ ರೆಡ್ಡಿ (Nitish Reddy) (74 ರನ್, 34 ಎಸೆತ, 4 ಬೌಂಡರಿ, 7 ಸಿಕ್ಸರ್), ರಿಂಕು ಸಿಂಗ್ (Rinku Singh) (53 ರನ್, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಕೆಲಕಾಲ ಬಾಂಗ್ಲಾ ಬೌಲರ್ಗಳನ್ನು ಬೆಂಡೆತ್ತಿದ ಪರಿಣಾಮ ಗುರಿಯನ್ನು 200ರ ಗಡಿ ದಾಟಿಸುವ ಮೂಲಕ ಎದುರಾಳಿಗಳಿಗೆ ದೊಡ್ಡ ಮೊತ್ತದ ಟಾರ್ಗೆಟ್ (target) ನೀಡಿದರು. ಇನ್ನೂ ಸ್ಪೋಟಕ ಬ್ಯಾಟಿಂಗ್ ಆಡಿದ ರಿಂಕು ಸಿಂಗ್ ಕೋಚ್ ಗೌತಮ್ ಗಂಭೀರ್ (Coach Gautam Gambhir) ಪಂದ್ಯಕ್ಕೂ ಮುನ್ನ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ನಮ್ಮ ಬೌಲರ್ಗಳು ಪ್ರಭಾವಶಾಲಿಯಾಗಿದ್ದರು ಕೂಡ… ಭಾರತದ ಎದುರು ಸರಣಿ ಸೋಲಿನ ಬಳಿಕ Bangladesh ನಾಯಕ ಹೇಳಿದ್ದಿಷ್ಟು
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ (Post Match Presentation) ಈ ಕುರಿತು ಮಾತನಾಡಿರವ ರಿಂಕು (Rinku Singh), ಪಂದ್ಯ ಶುರುವಾಗುವುದಕ್ಕೂ ಮುನ್ನ ಕೋಚ್ ಗೌತಮ್ ಗಂಭೀರ್ ಎಲ್ಲರಿಗೂ ಅವರವರ ಆಟ ಆಡುವಂತೆ ಸಲಹೆ ನೀಡಿದರು. ನೀವು ಹೋಗಿ ಚೆಂಡನ್ನು ಹೊಡೆಯುತ್ತಿರಿ ಎಂದು ಹೇಳಿದರು. ಅವರು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುವಾಗ ಬಾಲ್ ವಿಕೆಟ್ಗೆ ಹೆಚ್ಚಾಗಿ ಅಂಟಿಕೊಂಡಿತ್ತು. ಹೀಗಾಗಿ ಸಂಜು (Sanju Samson) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಬೇಗನೆ ಔಟಾದರು.
ನಾನು ಬ್ಯಾಟಿಂಗ್ ಮಾಡಲು ತೆರಳಿದಾಗ ರೆಡ್ಡಿ (NItish Reddy) ನನಗೆ ಈ ವಿಚಾರವನ್ನು ಹೇಳಿದರು. ಉತ್ತಮ ಜತೆಯಾಟ ಕಟ್ಟುವ ನಿಟ್ಟಿನಲ್ಲಿ ನಾವು ನಮ್ಮ ಆಟವನ್ನು ಆಡಿದೆವು. ಮೊದಲಿಗೆ ನಾವು ಹೆಚ್ಚಾಗಿ ಸಿಂಗಲ್ಸ್ ಕಡೆ ಫೋಕಸ್ ಮಾಡಿದೆವು. ಆ ನಂತರ ನಿತೀಶ್ ಒಂದು ಸಿಕ್ಸರ್ 9Sixer) ಬಾರಿಸಿದರು. ಅಲ್ಲಿಂದ ನಾವು ವೇಗದ ಆಟಕ್ಕೆ ಹೆಚ್ಚಿನ ಒತ್ತು ನೀಡಿದೆವು. ಆ ಕ್ಷಣ ನನಗಿಂತ ಹೆಚ್ಚಾಗಿ ತಂಡ ಮುಖ್ಯವಾಗಿತ್ತು ಹೀಗಾಗಿ ನಾವು ಹೆಚ್ಚಿನ ರನ್ ಗಳಿಸಿದೆವು. ಮುಂದಿನ ದಿನಗಳಲ್ಲಿ ಮೂರು ಮಾದರಿಗಳಲ್ಲಿ ಆಡುವ ವಿಶ್ವಾಸವಿದೆ ಎಂದು ರಿಂಕು ಸಿಂಗ್ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಹೇಳಿದ್ದಾರೆ.