ನಮ್ಮ ಬೌಲರ್​ಗಳು ಪ್ರಭಾವಶಾಲಿಯಾಗಿದ್ದರು ಕೂಡ... ಭಾರತದ ಎದುರು ಸರಣಿ ಸೋಲಿನ ಬಳಿಕ Bangladesh ನಾಯಕ ಹೇಳಿದ್ದಿಷ್ಟು

bangaldesh
Published on

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ (India) ಹಾಗೂ ಬಾಂಗ್ಲಾ (Bangladesh) ನಡುವೆ ನಡೆದ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಆತಿಥೇಯರ ಎದುರು ಪ್ರವಾಸಿಗಳು ಹೀನಾಯವಾಗಿ ಸೋಲುಂಡಿದ್ದು, ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದ್ದಾರೆ. 86 ರನ್​ಗಳ ಹೀನಾಯ ಸೋಲಿನ ಬಳಿಕ ನಾಯಕ ನಜ್ಮುಲ್​ ಹೊಸೈನ್​ ಶಾಂತೋ (Najmul Hosain Shanto) ಈ ಬಗ್ಗೆ ಮಾತನಾಡಿದ್ದು, ತಂಡದ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾ (Team India) ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ನಿತೀಶ್​ ರೆಡ್ಡಿ (Nitish Reddy) (74 ರನ್​, 34 ಎಸೆತ, 4 ಬೌಂಡರಿ, 7 ಸಿಕ್ಸರ್​), ರಿಂಕು ಸಿಂಗ್​ (Rinku Singh) (53 ರನ್​, 29 ಎಸೆತ, 5 ಬೌಂಡರಿ, 3 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 221 ರನ್​ ಗಳಿಸಿತು. ಕಠಿಣ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾ (Bangladesh) ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 20 ಓವರ್​ಗಳಲ್ಲಿ 135 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ಸರಣಿ ಟೀಮ್​ ಇಂಡಿಯಾ (Team India) ಪಾಲಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ಬಾಂಗ್ಲಾದೇಶ ನಾಯಕ ನಜ್ಮುಲ್​ ಹೊಸೈನ್​ ಶಾಂತೋ (Bangladesh Captain Najmul Hosain Shanto), ಸರಣಿಯ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲೂ ಮಾಡಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ. ಆರಂಭದಲ್ಲಿ ವಿಕೆಟ್​ ಕಳೆದುಕೊಂಡಾಗ ಟೀಮ್​ ಇಂಡಿಯಾ (Team India) ಕಮ್​ಬ್ಯಾಕ್​ ಮಾಡಿದ ರೀತಿ ಊಹಿಸಲು ಸಾಧ್ಯವಾಗಲಿಲ್ಲ. ಎದುರಾಳಿಗಳು ನಮಗೆ ಕಠಿಣ ಗುರಿ ನೀಡಿದಂತಹ ಸಂದರ್ಭದಲ್ಲಿ ಬ್ಯಾಟರ್​ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

ಪವರ್​ಪ್ಲೇ ನಂತರ ಅವರು ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ನಂತರ ನಾವು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲಿಲ್ಲ. ಬ್ಯಾಟ್ಸ್‌ಮನ್‌ಗಳಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗಿದೆ, ನಾವು ನಮ್ಮಲ್ಲಿ ನಂಬಿಕೆ ಹೊಂದಿದ್ದೇವೆ. ನಮ್ಮ ಬೌಲರ್‌ಗಳು ಬೌಲಿಂಗ್ ಮಾಡಿದ ರೀತಿ, ಅವರು ಪ್ರಭಾವಶಾಲಿಯಾಗಿದ್ದರು, ಆದರೆ ಮಧ್ಯಮ ಓವರ್​ಗಳಲ್ಲಿ ವಿಕೆಟ್​ ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಇದು ಎಲ್ಲೋ ನಮಗೆ ಹಿನ್ನಡೆಯಾಯಿತು ಎಂದು ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕ ನಜ್ಮುಲ್​ ಹೊಸೈನ್​ ಶಾಂತೋ (Najmul Shanto Hossain) ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ (Post Match Presentation) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net