ನವದೆಹಲಿ: ನಾವು ನೋಡಿರುವಂತೆ ಮದುವೆ ಮನೆಗಳಲ್ಲಿ (Marriage) ಸಾಮಾನ್ಯವಾಗಿ ತರ್ಲೆ ತಮಾಷೆಗಳು, ಎಡವಟ್ಟುಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಆಗುವ ಸಣ್ಣ ತಪ್ಪುಗಳು ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ. ಆದರೆ, ಮದುವೆ ಸಮಾರಂಭಗಳಲ್ಲಿ ಸಂಭ್ರಮ ಮಾತ್ರ ಮನೆ ಮಾಡಿರುತ್ತೆ. ಡ್ಯಾನ್ಸ್, ಕೀಟಲೆ ಸೇರಿದಂತೆ ಅನೇಕ ದೃಶ್ಯಗಳು ನೋಡಲು ಸಿಗುತ್ತವೆ. ಕೆಲವೊಂದು ದೃಶ್ಯಗಳು ಅತಿರೇಕವೆನಿಸಿದರು ನೋಡುಗರಿಗೆ ಮಜಾ ಕೊಡುವಲ್ಲಿ ಮಾತ್ರ ಫೇಲ್ ಆಗುವುದಿಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸಖತ್ ವೈರಲ್ (Video Viral) ಆಗುತ್ತಿದೆ.
ಮದುವೆ ಸಮಾರಂಭ ಒಂದರಲ್ಲಿ ವಧುವಿನ (Bride) ಕಡೆಯವರು ವರನಿಗೆ (Bride) ಡ್ಯಾನ್ಸ್ (Dance) ಮಾಡುವಂತೆ ಒತ್ತಾಯಿಸುತ್ತಾರೆ. ಇದರಿಂದ ಕೋಪಗೊಂಡ ಮದುಮಗ (Groom) ಸ್ಟೇಜ್ ಮೇಲೆ ಡಾನ್ಸ್ ಮಾಡುತ್ತಲೇ ವಧುವಿನ ಕೈ ಹಿಡಿದು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಅಲ್ಲದೇ ವೇದಿಕೆ ಮೇಲಿದ್ದವರ ಜೊತೆ ಜಗಳವನ್ನು ಆಡಿದ್ದಾನೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Video Viral) ಆಗಿದೆ.
ఇంకోసారి డ్యాన్స్ వేయమని అడుగుతారా..🙊🙊🤭🫣🤷🏻♀️😂😮💨 pic.twitter.com/ZanPc7MFOR
— లావణ్య (@lavanyawritings) October 8, 2024
ಇದನ್ನೂ ಓದಿ: ಭಾರತ ಭಾಗಿಯಾದರೆ ಪಾಕ್ನಲ್ಲಿ ನಡೆಯುವುದಿಲ್ಲ Champions Trophy; ಹೊರಬಿತ್ತು ಮೇಜರ್ ಅಪ್ಡೇಟ್
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ, ಯುವತಿಯೊಬ್ಬಳು ಮದುಮಗನನ್ನು ಭಾವಿಪತ್ನಿಯೊಂದಿಗೆ ಡ್ಯಾನ್ಸ್ ಮಾಡುವಂತೆ ಮುಂದಕ್ಕೆ ಎಳೆಯುತ್ತಾಳೆ. ಆರಂಭದಲ್ಲಿ ವರ ತನಗೆ ಡ್ಯಾನ್ಸ್ ಬರುವುದಿಲ್ಲ ಎಂದು ಹೇಳುತ್ತಾನೆ. ಇದನ್ನು ನೋಡಿದ ವಧು ವರನ ಕೈ ಹಿಡಿದು ಎಳೆದುಕೊಂಡು ಡ್ಯಾನ್ಸ್ ಮಾಡುತ್ತಾಳೆ. ಆರಂಭದಲ್ಲಿ ಖುಷಿಯಿಂದಲೇ ಹೆಜ್ಜೆ ಹಾಕುವ ವರ ಆ ಬಳಿಕ ಏಕಾಏಕಿ ಸಿಟ್ಟಿಗೆದ್ದು, ಮದುಮಗಳ ಕೈ ಹಿಡಿದು ಎಳೆದಾಡಿ ಆಕೆಯನ್ನು ಕೆಳಗೆ ಬೀಳಿಸಿ ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಬಳಿಕ ಅಲ್ಲಿದ್ದವರ ಜೊತೆ ಜಗಳವನ್ನು ಆಡುತ್ತಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Video Viral) ಆಗಿದೆ.
ಅಕ್ಟೋಬರ್ 08ರಂದು ಹಂಚಿಕೊಳ್ಳಲಾದ ಈ ವಿಡಿಯೋ (Viral Video) ಈವರೆಗೂ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಪರ-ವಿರೋಧದ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಕೆಲವರು ಇದು ಸ್ಕ್ರಿಪ್ಟೆಡ್ ಎಂದು ದೂರಿದರೆ ಮತ್ತಷ್ಟು ಜನ ಹುಡುಗನಿಗೆ ಶಾರ್ಟ್ ಟೆಂಪರ್ ಇರಬೇಕು ಎಂದು ಕಮೆಂಟ್ ಹಾಕಿದ್ದಾರೆ.