ಲಖನೌ: ವಾಹನ ಚಾಲನೆ ವೇಳೆ ಸವಾರರ ಜೀವಕ್ಕೆ ಯಾವುದೇ ಸಂಚಕಾರ ಬಾರದೇ ಇರಲಿ ಎಂದು ಸರ್ಕಾರವು ಕಟ್ಟುನಿಟ್ಟಾದ ಸಂಚಾರಿ ನಿಯಮಗಳನ್ನು ಜಾರಿ ಮಾಡಿದ್ದು, ಇದನ್ನು ಪಾಲಿಸದಿರುವವರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ದಂಡವನ್ನು(Fine) ಪಾವತಿಸದೆ ಇರುವಂತಹ ವ್ಯಕ್ತಿಗಳ ವಾಹನವನ್ನು ಅಧಿಕಾರಿಗಳು (Traffic Police) ಅನೇಕ ಬಾರಿ ಸೀಜ್ ಮಾಡಿರುವುದನ್ನು ನಾವು ನೋಡಿದ್ದೇವೆ. ಇದೀಗ ಟ್ರಾಫಿಕ್ ಫೈನ್ (Traffic Fine) ಕಟ್ಟುವಂತೆ ಸೂಚಿಸಿದ್ದಕ್ಕೆ ವ್ಯಕ್ತಿಯೋರ್ವ ಪೊಲೀಸ್ ಅಧಿಕಾರಿಗೆ (Traffic Police) ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಘಟನೆಯು ಉತ್ತರಪ್ರದೇಶದ (Uttar Pradesh) ಸಂಭಾಲ್ (Sambhal) ಜಿಲ್ಲೆಯ ಚಂದೌಸಿ ಕೊತ್ವಾಲಿ ಎಂಬ ಪ್ರದೇಶದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ (Arrest). ಅಲ್ಲದೇ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಇನ್ನೊಮ್ಮೆ ನನ್ನ ವಾಹನವನ್ನು ತಡೆದು ನಿಲ್ಲಿಸಿದರೆ ಚಾಕುವಿನಿಂದ ಇರಿಯುತ್ತೇನೆ ಎಂದು ಹೇಳುತ್ತಿರುವುದನ್ನು ನೋಡಬಹುದಾಗಿದೆ.
संभल – वाहन चेकिंग के दौरान बाइक सवारों ने दी धमकी
— भारत समाचार | Bharat Samachar (@bstvlive) October 9, 2024
➡बाइक सवार दो लोगों ने दी चाकू घोंपने की धमकी
➡बाइक का चालान काटने पर हुई थी कहासुनी
➡यातायात पुलिसकर्मी की तहरीर पर केस दर्ज
➡संभल के चंदौसी कोतवाली क्षेत्र का मामला.#Sambhal @sambhalpolice pic.twitter.com/yMKQjP8jXr
ಇದನ್ನೂ ಓದಿ: ಮಗುವನ್ನು Trolly bagಗೆ ಹಾಕಿಕೊಂಡು ಕಾಲ್ನಡಿಗೆ ಹೊರಟ ದಂಪತಿ; ನೀಡಿದ ಕಾರಣ ಹೀಗಿದೆ
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಟ್ರಾಫಿಕ್ ಪೊಲೀಸ್ (Traffic Police) ದೇವೇಂದ್ರ ತಮ್ಮ ಸಹೋದ್ಯೋಗಿ ಕುನಾಲ್ ಅವರೊಂದಿಗೆ ಚಂದೌಸಿ ಕೊತ್ವಾಲಿ ಪ್ರದೇಶದ ಲಾಲ್ ಪೆಟ್ರೋಲ್ ಬಂಕ್ ಬಳಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದ ಗಾಡಿಗಳನ್ನು ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ರಷೀದ್ ಅಹ್ಮದ್ ಎಂಬ ವ್ಯಕ್ತಿಯೂ ಹೆಲ್ಮೆಟ್ ಧರಿಸದೆ ಮತ್ತು ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಿಕೊಂಡು ಬಂದಿದ್ದನ್ನು ಗಮನಿಸಿ ವಾಹವನ್ನು ತಡೆದು ನಿಯಮದ ಪ್ರಕಾರ ದಂಡ ವಿಧಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ರಷೀದ್ ಅಹ್ಮದ್ ಹಾಗೂ ಆತನ ಜೊತೆಗಿದ್ದ ವ್ಯಕ್ತಿಯೂ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ಹೇಳಿಕೆಯನ್ನು ಅಧಿಕಾರಿ ಕುನಾಲ್ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ನೀಡಿದ ದೂರನ್ನು ಆಧರಿಸಿ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.