ಮಗುವನ್ನು Trolly bagಗೆ ಹಾಕಿಕೊಂಡು ಕಾಲ್ನಡಿಗೆ ಹೊರಟ ದಂಪತಿ; ನೀಡಿದ ಕಾರಣ ಹೀಗಿದೆ

Rajasthan Couple
Published on

ಜೈಪುರ: ಮದುವೆಯಾಗಿ ತುಂಬಾ ವರ್ಷ ಕಳೆದರೂ ಕೆಲವು ದಂಪತಿಗಳಿಗೆ (Couples) ಮಕ್ಕಳಾಗಿರುವುದಿಲ್ಲ (Children). ಅಂತಹ ಮನೆಯಲ್ಲಿ ಮಕ್ಕಳು ಜನಿಸಿದರೆ ಖುಷಿಗೆ ಪಾರವೇ ಇರುವುದಿಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ದಂಪತಿಗಳು ಮಗ ಹುಟ್ಟಿದ (Baby Birth) ಖುಷಿಗೆ 118 ಕಿಲೋಮೀಟರ್​ ಪಾದಯಾತ್ರೆ ಹೊರಟಿದ್ದು, ಇವರನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.

ರಾಜಸ್ಥಾನದ (Rajasthan) ಬಿಲ್ವಾರಾ-ಕೋಟಾ ಹೆದ್ದಾರಿಯಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಗುವನ್ನು ಇರಿಸಿ ದಂಪತಿ (Couples) ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದ ಜನರು ಈ ಬಗ್ಗೆ ಕೇಳಿದಾಗ ಅವರು ತಮಗೆ ಮಗು ಜನಿಸಿದ ಖುಷಿಗೆ ಪಾದಯಾತ್ರೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ತಿಳಿಸಿರುವ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಿಲ್ವಾರಾ ಜಿಲ್ಲೆಯ ಬಾಗೂರು (Bagur) ನಿವಾಸಿಗಳಾದ ದಂಪತಿಯು ಮದುವೆಯಾಗಿ 12 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ಜೋಗನಿಯ (Joganiya) ಮಾತೆಗೆ ಹರಕೆ ಕಟ್ಟಿಕೊಂಡಿದ್ದರು. ಮಗು ಜನಿಸಿದ ನಂತರ ದೇವಿಯ ಆಶೀರ್ವಾದ ಪಡೆಯಲು ದಂಪತಿ ನಿರ್ಧರಿಸಿದ್ದು, ಅದರಂತೆ ನವರಾತ್ರಿ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಹರಕೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ಮಗು ಚಿಕ್ಕದಿದ್ದ ಕಾರಣ  ಪ್ಲ್ಯಾನ್ ಮಾಡಿ ಟ್ರಾಲಿ ಬ್ಯಾಗ್​ನಲ್ಲಿ (Trolly Bag) ಹಾಕಿಕೊಂಡು ಪಾದಯಾತ್ರೆ ಹೊರಟಿದ್ದಾರೆ.

ಜೋಗನಿಯಾ ಮಾತಾ ಬಾಗೋರ್‌ನಿಂದ 118 ಕಿಲೋಮೀಟರ್ ದೂರದಲ್ಲಿದೆ. ಶನಿವಾರ ಸಂಜೆ ದಂಪತಿಗಳು ಬಾಗೋರಿನಿಂದ ಹೊರಟಿದ್ದು, ಸೋಮವಾರ ಸಂಜೆ ಜೋಗನಿಯಾ ಮಾತೆಯನ್ನು ತಲುಪಲಿದ್ದಾರೆ. ಕಾಲ್ನಡಿಗೆ ವೇಳೆ ಪಾದರಕ್ಷೆ ಧರಿಸದೆ ತೆರಳಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net