ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ (Arun Jaitly) ಕ್ರೀಡಾಂಗಣದಲ್ಲಿ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 86 ರನ್ಗಳ ಭರ್ಜರಿ ಜಯ ಗಳಿಸಿದ್ದು, ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರವಾಸಿ ತಂಡದ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ ಆತಿಥೇಯರು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ (Team India) ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ನಿತೀಶ್ ರೆಡ್ಡಿ (Nitish Reddy) (74 ರನ್, 34 ಎಸೆತ, 4 ಬೌಂಡರಿ, 7 ಸಿಕ್ಸರ್), ರಿಂಕು ಸಿಂಗ್ (Rinku Singh) (53 ರನ್, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಕಠಿಣ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾ (Bangladesh) ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 20 ಓವರ್ಗಳಲ್ಲಿ 135 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ಸರಣಿ ಟೀಮ್ ಇಂಡಿಯಾ (Team India) ಪಾಲಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ನನಗೆ ಫೈನ್ ಹಾಕಿದ್ರೆ ಚುಚ್ಚೇ ಬಿಡ್ತೀನಿ; Traffic Policeಗೆ ವ್ಯಕ್ತಿ ಧಮ್ಕಿ ಹಾಕುತ್ತಿರುವ Video Viral
ಇನ್ನೂ ನಿನ್ನೆಯ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ ಏರಿಸಿದ್ದ ಹಾರ್ದಿಕ್ಗೆ ಬೌಲಿಂಗ್ ಮಾಡಲು ಅವಕಾಶ ನೀಡಿರಲಿಲ್ಲ. ಈ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮಾತನಾಡಿದ್ದು, ಹಾರ್ದಿಕ್ಗೆ ಬೌಲಿಂಗ್ ಮಾಡದಿರುವ ಕುರಿತು ಕಾರಣವನ್ನು ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಉಲ್ಲೇಖಿಸಿದ್ದಾರೆ.
ವಿಭಿನ್ನ ಸಮಯದಲ್ಲಿ ಬೌಲರ್ಗಳು ಏನು ಮಾಡುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಕೆಲವೊಮ್ಮೆ ಹಾರ್ದಿಕ್ ಬೌಲಿಂಗ್ ಮಾಡುವುದಿಲ್ಲ, ಕೆಲವೊಮ್ಮೆ ವಾಷಿಂಗ್ಟನ್ ಬೌಲಿಂಗ್ ಮಾಡುವುದಿಲ್ಲ. ಅವರ ಬಳಿ ಮುಖ್ಯವಾಗಿ ಏನು ಇದೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಇನ್ನೂ ಹುಡುಗರು ಆಡಿದ ರೀತಿ ನಿಜಕ್ಕೂ ಖುಷಿ ನೀಡಿದೆ ಎಂದು ಟೀಮ್ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.