ಉದ್ಯಮ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರಕ್ಕೂ ಗಣನೀಯ ಕೊಡುಗೆ ನೀಡಿದ್ದಾರೆ Ratan Tata; ಅವರೆಲ್ಲರೂ ಇಂದು ಸೂಪರ್​​ಸ್ಟಾರ್ಸ್​​ ​​

Ratan Tata

ಮುಂಬೈ: ವಿಶ್ವದ ಟಾಪ್​ಮೋಸ್ಟ್​ ಉದ್ಯಮಿಗಳಲ್ಲಿ ಒಬ್ಬರಾದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್​ ಟಾಟಾ (86) (Ratan Tata) ಇಹಲೋಕ ತ್ಯಜಿಸಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅಕ್ಟೋಬರ್​ 09ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ (Breach Candy Hospital) ಕೊನೆಯುಸಿರೆಳೆದಿದ್ದಾರೆ. ಉದ್ಯಮದ ಹೊರತಾಗಿ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರತನ್​ ಟಾಟಾ (Ratan Tata) ಸಾಕಷ್ಟು ಜನರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಉದ್ಯಮಿ ಮತ್ತು ಲೋಕೋಪಕಾರಿಯಾಗಿ ಗಮನಾರ್ಹ ಸಾಧನೆಗಳಿಗೆ ಹೆಸರುವಾಸಿಯಾದ ರತನ್ ಟಾಟಾ (Ratan Tata) ಅವರು ಭಾರತದ ಆರ್ಥಿಕತೆಯನ್ನು (Indian Economy) ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಶಾಂತ ಸ್ವಭಾವದ ವರ್ತನೆಯಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದ ರತನ್​ ಟಾಟಾ (Ratan Tata) ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಯಶಸ್ವಿ ಬಿಸಿನೆಸ್​ಮ್ಯಾನ್​ಗಳಲ್ಲಿ (Businessman) ಒಬ್ಬರಾಗಿದ್ದರು.

ಉದ್ಯಮ ಮಾತ್ರವಲ್ಲದೇ ಕ್ರೀಡಯಲ್ಲೂ (Sports) ಅಪಾರ ಆಸಕ್ತಿ ಹೊಂದಿದ್ದ ರತನ್​ ಟಾಟಾ ಟೀಮ್​ ಇಂಡಿಯಾದ (Team India) ಅನೇಕ ಮಾಜಿ ಹಾಗೂ ಹಾಲಿ ಆಟಗಾರರಿಗೆ ಸಹಾಯ ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಾರ್ಪೋರೇಟ್​ ಹೊರತಾಗಿ ಭಾರತೀಯ ಕ್ರಿಕೆಟ್ (Indian Cricket)​ ಹಾಗೂ ಆಟಗಾರರ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರತನ್​ ಟಾಟಾ ಕ್ರೀಡಾ ಕ್ಷೇತ್ರಕ್ಕೂ ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ದೇಶದ ಹಲವು ಅಗ್ರ ಕ್ರಿಕೆಟಿಗರು ತಮ್ಮ ಯಶಸ್ಸಿನ ಭಾಗವನ್ನು ಟಾಟಾ ಗ್ರೂಪ್ ಒದಗಿಸಿದ ಬೆಂಬಲಕ್ಕೆ ಕಾರಣವೆಂದು ಹೇಳಿಕೊಂಡಿದ್ದಾರೆ.

BCCI

ಇದನ್ನೂ ಓದಿ: BJP ಶಾಸಕನನ್ನು ಪೊಲೀಸರ ಮುಂದೆಯೇ ಥಳಿಸಿದ Advocate; Video Viral

ವರ್ಷಗಳಿ ಕಳೆದಂತೆ ಟಾಟಾ ಗ್ರೂಪ್​ ಲಾಂಛನದಡಿಯಲ್ಲಿ ಅನೇಕ ಕಂಪನಿಗಳನ್ನು ಹುಟ್ಟುಹಾಕಿದ ರತನ್​ ಟಾಟಾ ಭಾರತೀಯ ಕ್ರಿಕೆಟಿಗರಿಗೆ ಉದ್ಯೋಗಾವಕಾಶಗಳು (Job Opportunities), ಹಣಕಾಸಿನ ನೆರವು (Financial Aid) ಮತ್ತು ವೃತ್ತಿಜೀವನವನ್ನು (Career) ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಲೆಮಾರುಗಳಿಂದ ಭಾರತ ಕ್ರಿಕೆಟ್​ ತಂಡದ ಆಟಗಾರರು ಟಾಟಾ ಗ್ರೂಪ್ಸ್​ (Tata Groups) ವತಿಯಿಂದ ಸಹಾಯವನ್ನು ಪಡೆದಿದ್ದು, ಆಟಗಾರರಾದ ಫರೋಖ್ ಇಂಜಿನಿಯರ್, ಮೊಹಿಂದರ್ ಅಮರನಾಥ್, ಸಂಜಯ್ ಮಂಜ್ರೇಕರ್, ರಾಬಿನ್ ಉತ್ತಪ್ಪ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರಿಗೆ ಟಾಟಾ ಮೋಟಾರ್ಸ್​​ ಸಹಾಯ ಮಾಡಿದೆ.

ಟಾಟಾ ಗ್ರೂಪ್‌ನೊಂದಿಗೆ ಸಂಯೋಜಿತವಾಗಿರುವ ಇಂಡಿಯನ್ ಏರ್‌ಲೈನ್ಸ್​ನಿಂದ ಜಾವಗಲ್ ಶ್ರೀನಾಥ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಸಹಾಯ ಪಡೆದಿದ್ದು, ಅಜಿತ್ ಅಗರ್ಕರ್ (Tata Steel) ಮತ್ತು ರುಸಿ ಸೂರ್ತಿ (IHCL) ಶಾರ್ದೂಲ್ ಠಾಕೂರ್ (Tata Power) ಮತ್ತು ಜಯಂತ್ ಯಾದವ್ (Air India) ಆಟಗಾರರ ಬೆಳವಣಿಗೆಯಲ್ಲಿ ಸಹಾಯ ಮಾಡಿದ್ದು, ಕ್ರೀಡಾ ಕ್ಷೇತ್ರಕ್ಕೂ ಹಾಗೂ ರತನ್​ ಟಾಟಾ ಅವರಿಗಿರುವ ಸಂಬಂಧವನ್ನು ಅನೇಕರು ನೆನೆದಿದ್ದಾರೆ.

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…