Bigg Boss ಮನೆಯಿಂದ ಅರ್ಧಕ್ಕೆ ಹೊರನಡೆದ ಸ್ಫರ್ಧಿ; ಹೀಗಿದೆ ಕಾರಣ

BBK 11

ಬೆಂಗಳೂರು: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​​​ಬಾಸ್​ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಎರಡು ವಾರಗಳಾಗುತ್ತ ಬಂದಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ಹಾಗೂ ಎಡವಟ್ಟಿನಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಬಾರಿ ಸ್ವರ್ಗ-ನರಕ (hell-Heaven) ಥೀಮ್​ನಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಿಗ್​ಬಾಸ್​ (Bigg Boss) ಶೋನಿಂದ ಸ್ಫರ್ಧಿಯೊಬ್ಬರು ಅರ್ಧಕ್ಕೆ ಹೊರನಡೆದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

11ನೇ ಆವೃತ್ತಿಯ ಬಿಗ್​ಬಾಸ್ ಆರಂಭವಾಗಿ ಎರಡು ವಾರಗಳಾಗುತ್ತ ಬಂದಿದ್ದು, ಇಂದಿನ ಸಂಚಿಕೆಯಲ್ಲಿ ಮನೆಯ ಹೊಸ ಕ್ಯಾಪ್ಟನ್ (Captain) ​ಅನ್ನು ಆಯ್ಕೆ ಮಾಡಲಾಗುತ್ತದೆ. ದಿನ ಕಳೆದಂತೆ ಸ್ಫರ್ಧಿಗಳ ನಡುವೆ ಕಾಂಪಿಟೇಷನ್​ (Competition) ಜೋರಾಗುತ್ತಿದ್ದು, ಎಲ್ಲರೂ ತಾವು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಆಟ ಆಡುತ್ತಿದ್ದು, ಇದು ಅವರಿಗೆ ಮುಳುವಾದಂತೆ ಕಾಣುತ್ತಿದೆ. ಟಾಸ್ಟ್​ ಆಡುವ ವೇಳೆ ತುಕಾಲಿ ಸಂತೋಷ್​ ಅವರ ಪತ್ನಿ ಮಾನಸ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

BBK 11 Manasa

ಇದನ್ನೂ ಓದಿ: Pak ಆತಿಥ್ಯದಲ್ಲಿ Champions Trophy ನಡೆಯೋದು ಡೌಟ್​? ಬದಲಿ ತಾಣಗಳನ್ನುಆಯ್ಕೆ ಮಾಡಿದ ICC

ಟಾಸ್ಕ್​ (Task)​ ಆಡುವ ವೇಳೆ ಮಾನಸ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಮನೆಯ ಸ್ಫರ್ಧಿಗಳು ಕೆಲವು ಟಾಸ್ಕ್​ಗಳಿಗೆ ಆಯ್ಕೆ ಮಾಡದಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ. ಅವರಿಗೆ ಓಡಾಡುವುದಕ್ಕೂ ಕಷ್ಟವಾಗಿದ್ದು, ಕಾಲನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬೇಕಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಅವರು ಗುಣಮುಖರಾಗುವುದಕ್ಕೆ ಸಮಯ ಹಿಡಿಯುತ್ತದೆ ಎಂದು ಹೇಳಲಾಗಿದ್ದು, ಅವರು ಸ್ಫರ್ಧೆಯಿಂದ ಅರ್ಧಕ್ಕೆ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

ಕೆಲವು ದಿನಗಳ ಹಿಂದೆ ಮಾನಸ ಮಾಡಿದ ಎಡವಟ್ಟಿನಿಂದ ಮನೆಯ ಕ್ಯಾಪ್ಟನ್​ ಸೇರಿದಂತೆ ಎಲ್ಲರೂ ನಾಮಿನೇಟ್​ ಆಗಿದ್ದರು. ಬಿಗ್​ಬಾಸ್​ನಲ್ಲಿ (Bigg Boss) ಟಾಸ್ಕ್​ (Task) ನೀಡುವ ಮುನ್ನ ಬ್ಲೈಂಡ್ಸ್ (Blinds) ಇಳಿಸಲಾಗುತ್ತದೆ. ಬಿಗ್​ಬಾಸ್​ ನಿಯಮದ ಪ್ರಕಾರ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ. ಇದಕ್ಕೆ ಕಾರಣ ಅಲ್ಲಿ ಟಾಸ್ಕ್​ಗೆ ಸಿದ್ಧತೆ ಮಾಡುತ್ತಾ ಇರಲಾಗುತ್ತದೆ. ಟಾಸ್ಕ್​ ಹೇಗಿರುತ್ತದೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಮಾನಸಿಕವಾಗಿ ರೆಡಿ ಆಗುತ್ತಾರೆ. ಈ ಕಾರಣದಿಂದ ಇದಕ್ಕೆ ಅನುಮತಿ ಇಲ್ಲ. ಆದರೆ, ಮಾನಸಾ ಸೇರಿದಂತೆ ಕೆಲವರು ಬ್ಲೈಂಡ್ಸ್​ನ ಸರಿಸಿ ಹೊರಗೆ ಇಣುಕಿ ನೋಡಿದ ಪರಿಣಾಮ ಎಲ್ಲಾ ಸದಸ್ಯರು ನಾಮಿನೇಟ್​ ಆಗಿದ್ದರು.

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…