

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್ 11ನೇ ಆವೃತ್ತಿ (Bigg Boss 11th Season) ಆರಂಭಗೊಂಡು ಎರಡು ವಾರಗಳಾಗುತ್ತ ಬಂದಿದ್ದು, ಸ್ಫರ್ಧಿಗಳ (Contestants) ನಡುವಿನ ಕಿತ್ತಾಟ, ತರಲೆ ಹಾಗೂ ಲವ್ ವಿಚಾರವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿ ಸ್ವರ್ಗ-ನರಕ (hell-Heaven) ಥೀಮ್ನಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ದಿನ ಕಳೆದಂತೆ ರೋಚಕತೆ ಹೆಚ್ಚಾಗುತ್ತಿದ್ದು, ಇದೀಗ ಬಿಗ್‍ಬಾಸ್ (Bigg Boss) ಮನೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಬಿಗ್‍ಬಾಸ್ (Bigg Boss) ಮನೆಯಲ್ಲಿ ಎಮರ್ಜೆನ್ಸಿ (Emergency) ಎಂಬ ಶೀರ್ಷಿಕೆಯಡಿ ರಿಲೀಸ್ ಆಗಿರುವ ಪ್ರೋಮೋ (Promo) ನೋಡುವುದಾದರೆ ಕ್ರೇನ್ (Crane) ಮೂಲಕ ಮನೆ ಒಳಗೆ ಬೌನ್ಸರ್ಗಳು (Bouncers) ಎಂಟ್ರಿ ಕೊಟ್ಟಿದ್ದು, ಮನೆಯ ಒಳಗೆ ನುಗ್ಗಿ ನರಕದಲ್ಲಿರುವ (Hell) ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೊಡೆದು ಹಾಕಿದ್ದಾರೆ. ಇದನ್ನು ನೋಡಿದ ಸ್ಫರ್ಧಗಳು ಒಂದು ಕ್ಷಣ ಆಘಾತಕ್ಕೆ (Shock) ಒಳಗಾಗಿದ್ದು, ಯಾವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದಬುದನ್ನು ತಿಳಿಯದೆ ನೋಡುತ್ತ ನಿಂತಿದ್ದಾರೆ.
11ನೇ ಆವೃತ್ತಿಯ ಬಿಗ್‍ಬಾಸ್ (Bigg Boss) ಅನ್ನು ಈ ಬಾರಿ ಸ್ವರ್ಗ-ನರಕ ಥೀಮ್ನಲ್ಲಿ (Hell-Heaven Theme) ಆಯೋಜನೆ ಮಾಡಲಾಗಿದ್ದು, ಸ್ವರ್ಗದಲ್ಲಿರುವವರಿಗೆ ಸಿಗುವಷ್ಟು ಸೌಲಭ್ಯ ನರಕದಲ್ಲಿರಿರುವವರಿಗೆ ದೊರೆಯುವುದಿಲ್ಲ. ಈ ವಿಚಾರ ಬಿಗ್‍ಬಾಸ್ (Bigg Boss) ಮನೆಯಲ್ಲದೇ ಹೊರಗಡೆ ಕೂಡ ಸಾಕಷ್ಟು ಸದ್ದು ಮಾಡಿತ್ತು. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಪೂರ್ಣಗೊಂಡಿದ್ದು, ಎಲ್ಲರೂ ಇನ್ನು ಒಟ್ಟಾಗಿ ವಾಸಿಸೋಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ, ಸಂಚಿಕೆ ಪ್ರಸಾರವಾದ ನಂತರ ಅಂತಿಮ ಚಿತ್ರಣ ಹೊರಬೀಳಲಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್‍ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ ಎಂದರೆ ತಪ್ಪಾಗಲಾರದು.