ಈ ಒಂದು ಕಾರಣಕ್ಕಾಗಿ ನನ್ನನ್ನು Retain​ ಮಾಡಿ; ಹಾಲಿ ಚಾಂಪಿಯನ್ಸ್​ಗೆ ವಿಶೇಷ ಬೇಡಿಕೆ ಇಟ್ಟ ಸ್ಟಾರ್​ ಆಟಗಾರ

KKR
Published on

ನವದೆಹಲಿ: 18ನೇ ಆವೃತ್ತಿಯ ಐಪಿಎಲ್​ (IPL) ಆರಂಭಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಈಗಾಗಲೇ ರಿಟೇನ್​ (Retain) ನಿಯಮವನ್ನು ಬಿಡುಗಡೆ ಮಾಡಿರುವ ಆಡಳಿತ ಮಂಡಳಿ ಈ ತಿಂಗಳಾಂತ್ಯಕ್ಕೆ ಪಟ್ಟಿ ಸಲ್ಲಿಸುವಂತೆ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ರಿಟೇನ್​ಗೆ ಸಂಬಂಧಿಸಿದಂತೆ ಈಗಾಗಲೇ ತಂಡಗಳು ಪಟ್ಟಿಯನ್ನು ಸಿದ್ದ ಮಾಡಿಕೊಂಡಿದ್ದು, ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

ರಿಟೇನ್​ ನಿಯಮಕ್ಕೆ ಸಂಬಂಧಿಸಿದಂತೆ ಕೆಲವು ಆಟಗಾರರು ತಾವು ಹಾಲಿ ಪ್ರತಿನಿಧಿಸುತ್ತಿರುವ ತಂಡದಲ್ಲಿ ಉಳಿದುಕೊಳ್ಳಲು ಇಲ್ಲಸಲ್ಲದ ಕಸರತ್ತನ್ನು ಮಾಡುತ್ತಿದ್ದು, ತಮ್ಮನ್ನು ಈ ಒಂದು ಕಾರಣಕ್ಕಾಗಿ ರಿಟೇನ್​ (Retain) ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಈ ಕುರಿತು ಮಾತನಾಡಿರುವ ಕಲ್ಕತ್ತಾ ನೈಟ್​ರೈಡರ್ಸ್​ (Kolkata Knight Riders) ತಂಡದ ಬ್ಯಾಟ್ಸ್​ಮನ್​ ನಿತೀಶ್​ ರಾಣಾ (Nitish Rana) ತಮ್ಮನ್ನು ಯಾವ ಕಾರಣಕ್ಕೆ ರಿಟೇನ್​ (Retain) ಮಾಡಬೇಕು ಎಂಬುದರ ಕುರಿತು ಕಾರಣವನ್ನು ನೀಡಿದ್ದಾರೆ.

Nitish Rana

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಿತೀಶ್ (Nitish)​, ನಾನು ಕಳೆದ ಏಳು ವರ್ಷಗಳಿಂದ ಕೆಕೆಆರ್‌ಗೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳುವುದು ನನ್ನ ಕೈಯಲ್ಲಿಲ್ಲ. ಉಳಿಸಿಕೊಳ್ಳುವುದು ನನ್ನ ಕೈಯಲ್ಲಿಲ್ಲ; ಅದನ್ನು ನಿರ್ಧರಿಸುವುದು ಕೆಕೆಆರ್ (KKR) ಆಡಳಿತಕ್ಕೆ ಬಿಟ್ಟದ್ದು. ನನಗೆ ಇನ್ನೂ ಯಾವುದೇ ಕರೆಗಳು ಬಂದಿಲ್ಲ. ನಾನು ಪ್ರತಿ ವರ್ಷ ಕೆಕೆಆರ್‌ಗಾಗಿ (KKR) ರನ್ ಗಳಿಸಿದ್ದೇನೆ ಮತ್ತು ಅವರು ನನ್ನನ್ನು ಆಸ್ತಿ ಎಂದು ಪರಿಗಣಿಸಿ ರಿಟೇನ್​ ಮಾಡಿಕೊಳ್ಳಬೇಕು. ಅವರು ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಐಪಿಎಲ್​ ರಿಟೇನ್​ಗೆ (IPL Retain) ಸಂಬಂಧಿಸಿದಂತೆ ಈಗಾಗಲೇ ಚಟುವಟಿಕೆಗಳು ಗರಿಗೆದರಿದ್ದು, ಬಹುತೇಕ ಎಲ್ಲಾ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಸಿದ್ದ ಮಾಡಿಕೊಂಡಿವೆ. ಅಕ್ಟೋಬರ್​ 31ರಂದು ತಂಡಗಳು ಆಡಳಿತ ಮಂಡಳಿಗೆ ಪಟ್ಟಿಯನ್ನು ಸಲ್ಲಿಸಲಿದ್ದು, ಆ ಬಳಿಕ ಯಾವ ಆಟಗಾರ ತಂಡದಲ್ಲಿ ಉಳಿದುಕೊಂಡಿದ್ದಾನೆ. ಯಾರು ಹರಾಜಿನಲ್ಲಿದ್ದಾರೆ ಎಂಬುದು ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net