ಟ್ರಂಪ್​ ಕಥೆ ಮುಗಿಸಲು ಕಾಯುತ್ತಿದ್ದೇವೆ ಎಂದ ಇರಾನ್​!

donald trump
ಡೊನಾಲ್ಡ್​ ಟ್ರಂಪ್​
Published on

ದುಬೈ: ಇರಾನ್​ನ ರೆವಲ್ಯೂಷನರಿ ಗಾರ್ಡ್ಸ್​ನ ಉನ್ನತ ಕಮಾಂಡರ್ ಒಬ್ಬರು ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಇತರ ಇಬ್ಬರು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾ , 'ಇರಾನ್ ಅತ್ಯುನ್ನತ ಕಮಾಂಡರ್ ಅನ್ನು ಅಮೆರಿಕ ಕೊಂದದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದೇವೆ. ಟ್ರಂಪ್​ರ ಕಥೆ ಮುಗಿಸಲು ಎದುರು ನೋಡುತ್ತಿದ್ದೇವೆ'' ಎಂದು ಹೇಳಿದ್ದಾರೆ.

2020ರಲ್ಲಿ ಬಾಗ್ದಾದ್‌ನಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್ ಮಿಲಿಟರಿ ಕಮಾಂಡರ್ ಕಾಸಿಮ್ ಸೊಲೈಮನಿ ಸಾವನ್ನಪ್ಪಿದ ದಿನಗಳ ನಂತರ ಇರಾಕ್‌ನಲ್ಲಿ ಅಮೆರಿಕ ನೇತೃತ್ವದ ಪಡೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಲಾಗಿತ್ತು. ಈ ಸಂದರ್ಭ ಇರಾನ್ "ಬಡ ಸೈನಿಕರನ್ನು" ಕೊಲ್ಲುವ ಉದ್ದೇಶವನ್ನು ಹೊಂದಿಲ್ಲ ಎಂದು ಕಮಾಂಡರ್ ಸ್ಪಷ್ಟಪಡಿಸಿದ್ದಾರೆ.

ದೂರದರ್ಶನದ ಸಂದರ್ಶನವೊಂದರಲ್ಲಿ, ಇರಾನ್​ನ ಹಾಲಿ ಕಮಾಂಡರ್​ ಹಜಿಝಾದೆ “ದೇವರ ಇಚ್ಛೆ, ನಾವು ಹಿಂದಿನ ಕಮಾಂಡರ್ ಸೊಲೈಮಾನಿಯನ್ನು ಕೊಲ್ಲಲು ಆದೇಶ ನೀಡಿದ್ದ ಟ್ರಂಪ್, ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ, ಅನ್ನು ಕೊಲ್ಲಲು ಎದುರು ನೋಡುತ್ತಿದ್ದೇವೆ.

ಇರಾನ್ 1,650 ಕಿಮೀ ವ್ಯಾಪ್ತಿಯ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು ಅದಾದ ಮೇಲೆ ಈ ಹೇಳಿಕೆ ಹೊರಬಿದ್ದಿದೆ. ಯುಕ್ರೇನ್ ಯುದ್ಧದಲ್ಲಿ ರಷ್ಯಾ ಇರಾನ್ ಡ್ರೋನ್‌ಗಳನ್ನು ಬಳಸಿದ ನಂತರ ಪಾಶ್ಚಿಮಾತ್ಯ ದೇಶಗಳಿಗೆ ಕಳವಳವ ಹೆಚ್ಚಾಗಲಿದೆ ಎಂದು ರೆವಲ್ಯೂಷನರಿ ಗಾರ್ಡ್‌ಗಳ ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಅಮಿರಾಲಿ ಹಜಿಝಾದೆ ಹೇಳಿದ್ದಾರೆ .

"1,650 ಕಿಮೀ ವ್ಯಾಪ್ತಿ ಹೊಂದಿರುವ ನಮ್ಮ ಕ್ರೂಸ್ ಕ್ಷಿಪಣಿಯನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಕ್ಷಿಪಣಿ ಶಸ್ತ್ರಾಗಾರಕ್ಕೆ ಸೇರಿಸಲಾಗಿದೆ" ಎಂದು ಹಜಿಜಾದೆ ಅವರು ಇರಾನ್​ನ ರಾಜ್ಯ ಟಿವಿಗೆ ತಿಳಿಸಿದರು.

ಇರಾನ್ ನಾಯಕರು ಆಗಾಗ್ಗೆ ಸುಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ. ಇರಾನ್​, ಅದರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು, ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ವಿರೋಧದ ಎದುರು ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ವಿಸ್ತರಿಸಿದೆ.

ಯುಕ್ರೇನ್‌ ಯುದ್ಧದ ಮೊದಲು ಮಾಸ್ಕೋಗೆ ಡ್ರೋನ್‌ಗಳನ್ನು ಪೂರೈಸಿದೆ ಎಂದು ಇರಾನ್ ಹೇಳಿತ್ತು. ಆ ಡ್ರೋನ್​ಗಳನ್ನು ರಷ್ಯಾ ವಿದ್ಯುತ್ ಕೇಂದ್ರಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಬಳಸಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net