'ಒಂದಕ್ಕೆ ಇನ್ನೊಂದು ಉಚಿತ' ಆಫರ್ ಕೊಟ್ಟ ಸೈಬರ್​ ಕಳ್ಳ; ಈತ ಕಳೆದುಕೊಂಡದ್ದು 3.98 ಲಕ್ಷ ರೂ.!

Cyber Crime
Published on

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಕಂಡ 'ಒಂದು ಥಾಲಿ ಖರೀದಿಸಿ ಇನ್ನೊಂದನ್ನು ಉಚಿತವಾಗಿ ಪಡೆಯಿರಿ' ಎಂಬ ಆಫರ್‌ ಆಸೆಗೆ ಬಿದ್ದ ಯುವಕನೊಬ್ಬ ಸೈಬರ್ ಕಳ್ಳರಿಂದಾಗಿ 3.98 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ .

ತ್ಯಾಗರಾಜನಗರದ ನಿವಾಸಿ ಉಪೇಂದ್ರ ಕುಮಾರ್ (38) ಎಂಬಾತ ಎಫ್‌ಬಿಯಲ್ಲಿ ರಾಜಸ್ಥಾನದ ಥಾಲಿಯನ್ನು ಒಂದರ ಬೆಲೆಗೆ ಉಚಿತವಾಗಿ ನೀಡುವುದಾಗಿ ಪೋಸ್ಟ್ ನೋಡಿದ್ದಾನೆ.

ಉಪೇಂದ್ರ ಕುಮಾರ್ ಅವರು ಪೋಸ್ಟ್ ಅನ್ನು ಕ್ಲಿಕ್ ಮಾಡಿದ ನಂತರ ಅವರು ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಎರಡು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಥಾಲಿ ಕೊಡುಗೆಯನ್ನು ಪಡೆಯಲು 1 ರೂಪಾಯಿಯನ್ನು ವರ್ಗಾಯಿಸಲು ಕೇಳಿಕೊಂಡ ಮೆಸೇಜ್​ ಒಂದು ಬಂದಿದೆ. ಇದನ್ನು ಟ್ರ್ಯಾಪ್​ ಎಂದು ಅರಿಯದೇ ನಂಬಿ ಹೇಳಿದ್ದೆಲ್ಲವನ್ನೂ ಮಾಡಿದ್ದಾರೆ.

ಕಳ್ಳರು ಹೇಳಿದಂತೆ ಮಾಡಿದಾಗ ಅವರ ಬ್ಯಾಂಕ್ ಖಾತೆಯಿಂದ 3.98 ಲಕ್ಷ ರೂ. ಡ್ರಾ ಆಗಿದೆ. ಆಗ ಕುಮಾರನಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net