ಕೆಯುಐಡಿಎಫ್​​ಸಿಯಲ್ಲಿ ಇಂಜಿನಿಯರ್ ಆಗಲು ಬಯಸಿದ್ದೀರಾ? ಅರ್ಹತೆಗಳೇನಿವೆ ನೋಡಿ...

Engineer JPG
Published on

ಬೆಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲುಎಸ್​​ಎಂಪಿ) ಅಡಿ ಬೆಂಗಳೂರಿನ ಯೋಜನಾ ಮೇಲ್ವಿಚಾರಣಾ ಘಟಕ ಹಾಗೂ ಹುಬ್ಬಳ್ಳಿ, ಬೆಳಗಾವಿ ಹಾಗೂ ಕಲಬುರಗಿಯ ಯೋಜನಾ ಅನುಷ್ಠಾನ ಘಟಕಗಳಲ್ಲಿ ಖಾಲಿ ಇರುವ ತಾಂತ್ರಿಕ, ತಾಂತ್ರಿಕೇತರ ಒಟ್ಟು 47 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳು: ಅಧೀಕ್ಷಕ ಅಭಿಯಂತರ-3. ಕಾರ್ಯನಿರ್ವಾಹಕ ಅಭಿಯಂತರ -ಸಿವಿಲ್-2, ಇಲೆಕ್ಟ್ರಿಕಲ್-1. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ - ಸಿವಿಲ್-2, ಎಲೆಕ್ಟ್ರಿಕಲ್-2. ಸಹಾಯಕ ಅಭಿಯಂತರ- ಸಿವಿಲ್-9, - ಇಲೆಕ್ಟ್ರಿಕಲ್-3, ಎಂಐಎಸ್ ಎಕ್ಸ್​ಪರ್ಟ್-1. ವ್ಯವಸ್ಥಾಪಕ-3, ವ್ಯವಸ್ಥಾಪಕ (ಹಣಕಾಸು)/ ಹಣಕಾಸು ಪರಿಣತ-1, ಲೆಕ್ಕಪತ್ರ ಅಧೀಕ್ಷಕ/ ಲೆಕ್ಕಪತ್ರ ಅಧಿಕಾರಿ-4, ಸಾರ್ವಜನಿಕ ಸಂಪರ್ಕಾಧಿಕಾರಿ-3, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತ-2, ಸಾಮಾಜಿಕ ಅಭಿವೃದ್ಧಿ ಮತ್ತು ಎಂ,ಇ ಪರಿಣತ-2, ಲೆಕ್ಕ ಸಹಾಯಕ-2, ಡಿಇಒ/ ಕಂಪ್ಯೂಟರ್ ಆಪರೇಟರ್-7 ಹುದ್ದೆಗಳಿವೆ.

ವಿದ್ಯಾರ್ಹತೆ, ಮೆರಿಟ್, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಗರಿಷ್ಠ ವಯೋಮಿತಿ 63 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ಕಚೇರಿ, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ ಕೆಯುಐಡಿಎಫ್​​ಸಿ ಸಂಸ್ಥೆಯಲ್ಲಿ ಈ ಮೊದಲು ಕಾರ್ಯನಿರ್ವಹಿಸಿ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಶೈಕ್ಷಣಿಕ ವಿದ್ಯಾರ್ಹತೆ/ ಅನುಭವ/ ಕಾರ್ಯಸ್ಥಳ/ ಕರ್ತವ್ಯಗಳ ವಿವರವನ್ನು ಸಂಸ್ಥೆಯ ವೆಬ್​ಸೈಟ್​ನಲ್ಲಿ ನೀಡಲಾಗಿದೆ. ಅರ್ಹ ಮತ್ತು ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ವೆಬ್​​ಸೈಟ್: www.kuidfc.com/careers

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net