More

    ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!

    ಬೆಂಗಳೂರು: ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವಾರವಾಯಿತು. ಅವರ ಸಾವಿನ ಸುದ್ದಿ ಇಡೀ ಕರುನಾಡನ್ನೇ ಅಷ್ಟರಶಃ ಶಾಕ್​ಗೆ ದೂಡಿತ್ತು. ಇತ್ತ ನೆಚ್ಚಿನ ನಟನನ್ನು ಕಳೆದುಕೊಂಡ ಚಿತ್ರರಂಗ ಮಮ್ಮಲ ಮರುಗಿತ್ತು. ಸಾವಿನ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಅವರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಫೋಟೋ ಸಮೇತ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತಿತ್ತು. ಇತ್ತ ಪ್ರೀತಿಸಿ ಇಷ್ಟಪಟ್ಟವನನ್ನೇ ವರಿಸಿದ್ದ ಮೇಘನಾ ಸ್ಥಿತಿಯಂತೂ ಹೇಳತೀರದು. ಜೂ.7ರ ದೃಶ್ಯಗಳು ನಿಜಕ್ಕೂ ಕಲ್ಲು ಹೃದಯದವರನ್ನೂ ಕರಗಿಸುವಂತಿದ್ದವು. ವಿಧಿ ನಿಜಕ್ಕೂ ಇಷ್ಟೊಂದು ಕ್ರೂರಿ ಅನಿಸದೇ ಇರದು!

    ಇದನ್ನೂ ಓದಿ: PHOTOS| ಇದು ನನ್ನ ಪ್ರಪಂಚ, ಇಲ್ಲಿ ಆತನಿಗಷ್ಟೇ ಎಂಟ್ರಿ!; ಮತ್ತೆ ಮತ್ತೆ ಭಾವುಕರಾದ ಧ್ರುವ …

    ಚಿರು ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ, ಮೇಘನಾ ಐದು ತಿಂಗಳ ಗರ್ಭಿಣಿ ಎಂಬ ಸುದ್ದಿಯೂ ಎಲ್ಲೆಡೆ ಪಸರಿಸಿತ್ತು. ನೋವಿನ ನಡುವೆಯೇ, ಮೇಘನಾ ಸ್ಥಿತಿ ಕಂಡು ಜನತೆ ಕಣ್ಣೀರಾಕಿದ್ದರು. ಹೊಟ್ಟೆಯಲ್ಲಿ ಮಗು, ಕಣ್ಣ ಮುಂದೆ ಪತಿಯ ಶವ; ಕರುನಾಡ ಜನರನ್ನೇ ನಡುಗಿಸಿತ್ತು ಆ ದೃಶ್ಯ. ಸೋತು, ಬಸವಳಿದು, ನಿತ್ರಾಣರಾಗಿದ್ದ ಮೇಘನಾ, ಗರ್ಭಿಣಿ ಆಗಿದ್ದರಿಂದ ಅವರ ಬಗ್ಗೆಯೂ ಕಾಳಜಿ ವಹಿಸಲಾಗಿತ್ತು. ಈ ನಡುವೆ ಅವರ ಆರೋಗ್ಯದ ಬಗ್ಗೆಯೂ ಒಂದಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು. ಚಿರು ಸಾವಿನ ಬೆನ್ನಲ್ಲೇ ಮೇಘನಾ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಮಾತು ಕೇಳಿಬಂದಿತ್ತು. ಆ ಸುದ್ದಿಯ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

    ಇದನ್ನೂ ಓದಿ: ಕಡಿಮೆ ಸಮಯದಲ್ಲಿ ಮಿಂಚಿ ಮರೆಯಾದವರು …
    ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ್​, ಮೇಘನಾ ಆರೋಗ್ಯದ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ‘ಮೇಘನಾ ಆರೋಗ್ಯವಾಗಿದ್ದಾರೆ. ಈ ಹೊತ್ತಲ್ಲಿ ಒಂದಷ್ಟು ನೋವು ಮತ್ತು ಆತಂಕ ಸಹಜ. ಅವರ ಆರೋಗ್ಯದ ಉಸ್ತುವಾರಿಯನ್ನು ಅರ್ಜುನ್​ ಸರ್ಜಾ ಅವರ ತಾಯಿ ವಹಿಸಿಕೊಂಡಿದ್ದಾರೆ. ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಹರಿದಾಡಿದ ಇಲ್ಲ ಸಲ್ಲದ ಸುದ್ದಿಗಳಿಗೆ ಬ್ರೇಕ್​ ಹಾಕಿದ್ದಾರೆ ಶಿವಾರ್ಜುನ್​. ಇನ್ನು ಜೂ. 17ಕ್ಕೆ ಕನಕಪುರ ರಸ್ತೆಯ ನೆಲಗುಳಿಯಲ್ಲಿರುವ ಬೃಂದಾವನ ಫಾರ್ಮ್​ಹೌಸ್​ನಲ್ಲಿ ಚಿರಂಜೀವಿ ತಿಥಿ ಕಾರ್ಯ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ಚಿರು ಸರ್ಜಾ ತಿಥಿ; ಎಲ್ಲಿ, ಯಾವತ್ತು, ಹೇಗೆ ನಡೆಯಲಿದೆ?; ಕರೊನಾ ಹಿನ್ನೆಲೆ ಕುಟುಂಬಸ್ಥರಿಂದ ಕಠಿಣ ನಿರ್ಧಾರ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts