ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?

collage (6)
Published on

ಸರ್ಜಾ ಕುಟುಂಬದ ಸಿನಿಮಾದ ಯಾವುದಾದರೂ ಒಂದು ಡೈಲಾಗ್​ನಲ್ಲಿ ಆಂಜನೇಯ ಇರಲೇಬೇಕು.. ಹಾಡಿನಲ್ಲಾದರೂ ಹನುಮನ ಜಪ ಮಾಡಲೇಬೇಕು.. ಒಂದರ್ಥದಲ್ಲಿ ಆಂಜನೇಯ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಸರ್ಜಾ ಕುಟುಂಬ. ಆದರೆ, ಮಾತು ಮಾತಿಗೂ ಜೈ ಆಂಜನೇಯ.. ಜೈ ಆಂಜನೇಯ ಎನ್ನುತ್ತಿದ್ದ ಸರ್ಜಾ ಕುಟುಂಬಕ್ಕೆ ಆ ಆಂಜನೇಯ ಮಾತ್ರ ಕೈ ಹಿಡಿಯಲಿಲ್ಲ. ಇನ್ನೇನು ಅಪ್ಪ ಆಗುತ್ತಿದ್ದೇನೆ ಅನ್ನೋ ಖುಷಿಯನ್ನು ಹೊರಜಗತ್ತಿಗೆ ಹೇಳಿ ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ, ವಿಧಿಯ ಕೈಯೇ ಮೇಲಾಯಿತು! ಸಂಭ್ರಮದಿಂದ ಇದ್ದ ಕುಟುಂಬಕ್ಕೆ ಬರಸಿಡಿಲು ಬಂದಂತೆ ಬಂದು ಚಿರಂಜೀವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು ವಿಧಿ!

ಕಳೆದ 2013ರಲ್ಲಿ ಚೆನ್ನೈನ ಗೇರುಗಂಬಕಮ್​ನಲ್ಲಿರುವ ಅರ್ಜುನ್​ ಸರ್ಜಾ ಫಾರ್ಮ್​ಹೌಸ್​ನಲ್ಲಿ ರಾಮದೂತ ಹನುಮನ 35 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಅಷ್ಟೇ ಅಲ್ಲ ವೈಭವ ಜಾತ್ರಾ ಮಹೋತ್ಸವದ ರೀತಿಯಲ್ಲಿ ಅದರ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಅದಾದ ಬಳಿಕ ನಿತ್ಯ ಅದರ ಪೂಜೆ, ಪುನಸ್ಕಾರಗಳೂ ನಡೆದವು. ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು. ಯಾವುದೇ ಕೆಲಸ ಇದ್ದರೂ, ಮೊದಲ ಪೂಜೆ ರಾಮಧೂತನಿಗೆ. ಅದನ್ನು ಗಮನದಲ್ಲಿಟ್ಟುಕೊಂಡೇ ನಿತ್ಯ ಹೊರಹೋಗುವ ಮುನ್ನ ಹನುಮನ ದರ್ಶನ ಮಾಡಿಯೇ ಅರ್ಜುನ್​ ಸರ್ಜಾ ಮತ್ತು ಕುಟುಂಬ ಹೊರಗೆ ಕಾಲಿಡುತ್ತಿತ್ತು. ಆದರೆ, ಇದೀಗ ಚಿರು ಸಾವಿನ ಹಿನ್ನೆಲೆಯಲ್ಲಿ ಗೇರುಗಂಬಕಮ್​ನಲ್ಲಿ ಆಂಜನೇಯ ದೇವಸ್ಥಾನದ ಸ್ಥಿತಿ ಹೇಗಿದೆ?

ನಿರ್ಮಾಣ ಹಂತದಲ್ಲಿನ ಆಂಜನೇಯ ಸ್ವಾಮಿ ಮೂರ್ತಿ
ನಿರ್ಮಾಣ ಹಂತದಲ್ಲಿನ ಆಂಜನೇಯ ಸ್ವಾಮಿ ಮೂರ್ತಿ

ಚಿರು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕುಟುಂಬ ಬೆಂಗಳೂರಿನ ಚಿರು ನಿವಾಸಕ್ಕೆ ಆಗಮಿಸಿದೆ. ಅತ್ತ ಗೇರುಗಂಬಕಂನ ಆಂಜನೇಯ ದೇವಸ್ಥಾನದಲ್ಲಿ ಮಾತ್ರ ನೀರವ ಮೌನ ಆವರಿಸಿದೆ. ಪೂಜೆ ಪುನಸ್ಕಾರಗಳು ನಿಂತಿವೆ. ಸಾವಿನ ಹಿನ್ನೆಲೆಯಲ್ಲಿ ಗರ್ಭ ಗುಡಿಯನ್ನೇ ಮುಚ್ಚಲಾಗಿದೆ ಎನ್ನಲಾಗುತ್ತಿದೆ. ಕುಟುಂಬದ ಸಾವಿನ ಸುದ್ದಿ ಮಾಸುವವರೆಗೂ ಆ ದೇವಸ್ಥಾನ ತೆರೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಒಟ್ಟಾರೆಯಾಗಿ ರಾಮನಾಮ, ರಾಮಧೂತನ ಜಪ ಮಾಡುತ್ತಿದ್ದ ಕುಟುಂಬಕ್ಕೀಗ ಬರಸಿಡಿಲು ಬಡಿದಂತಾಗಿದೆ. ನಂಬಿದ ದೇವರು ಕೈಬಿಟ್ಟನಲ್ಲ ಎಂಬ ಕೊರಗಿನಲ್ಲಿಯೇ ಕಾಲಕಳೆಯುತ್ತಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net