ಕೋಡಿಹಳ್ಳಿ ಪೊಲೀಸರಿಂದ ಅಂತಾರಾಜ್ಯ ಕಳ್ಳರ ಬಂಧನ

Published on

ಕನಕಪುರ: ತಾಲೂಕಿನ ಹುಣಸನಹಳ್ಳಿ ಸಮೀಪದ ಬನ್ನಿಮುಕ್ಕೋಡ್ಲು ಗ್ರಾಮದ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಅಂತರ್​ರಾಜ್ಯ ಕಳ್ಳರನ್ನು ಶನಿವಾರ ಬಂಧಿಸಿರುವ ಕೋಡಿಹಳ್ಳಿ ಪೊಲೀಸರು 3.5 ಲಕ್ಷ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಮಿಳುನಾಡಿನ ತಿರಪ್ಪೂರು ಜಿಲ್ಲೆ, ರಾಜಪಾಳಯಂ ಸಮೀಪದ ಕೊಡವಟ್ಟು ಗ್ರಾಮದ ಶಕ್ತಿವೇಲು(35), ಆತನ ಸಂಬಂಧಿ ಶಶಿಕುಮಾರ್​(45) ಬಂಧಿತರು.

ಕನಕಪುರ ತಾಲೂಕು ಕೋಡಿಹಳ್ಳಿ ಠಾಣಾ ಸರಹದ್ದಿನ ಚಿಕ್ಕಮುಕ್ಕೋಡ್ಲು ಗ್ರಾಮದ ಚಿಕ್ಕಣ್ಣನ ಮನೆಯಲ್ಲಿ ಅ.10 ರಂದು ಮನೆ ಬಾಗಿಲು ಮುರಿದು ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದರು.

ಎಸ್​ಪಿ ವರಿಷ್ಠಾಧಿಕಾರಿ ಕಾರ್ತಿಕ್​ರೆಡ್ಡಿ ಮಾರ್ಗದರ್ಶನದಲ್ಲಿ ಸರ್ಕಲ್​ ಇನ್​ಸ್ಪೆಕ್ಟರ್​ ಕೆ.ಎಲ್​.ಕೃಷ್ಣ, ಎಸ್​ಐ ರವಿಕುಮಾರ್​, ಸಿಬ್ಬಂದಿ ತಂಡ ರಚಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net