ಜಪಾನ್​ನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ; ಭಾರತಿಯ ಸಂಸ್ಕೃತಿ ಪರಿಷತ್, ಹೃದಯವಾಹಿನಿ ಸಹಯೋಗ

Cultural Fest F
Published on

ಟೋಕಿಯೋ: ಭಾರತೀಯ ಸಂಸ್ಕೃತಿ, ಕನ್ನಡದ ಕಂಪು ಆಗಾಗ ವಿದೇಶಗಳಲ್ಲೂ ಅನಾವರಣಗೊಳ್ಳುತ್ತಿದ್ದು, ದೂರದ ಜಪಾನ್​ನಲ್ಲಿನ ಟೋಕಿಯೋದಲ್ಲಿ ಕೂಡ ಅಂಥದ್ದೊಂದು ಸಮಾರಂಭ ಇತ್ತೀಚೆಗೆ ನಡೆದಿದೆ.

ಭಾರತಿಯ ಸಂಸ್ಕೃತಿ ಪರಿಷತ್ ಮತ್ತು ಹೃದಯವಾಹಿನಿ ಸಹಯೋಗದಲ್ಲಿ ವಿಶ್ವ ಸೌಹಾರ್ದತೆಗಾಗಿ ಜಪಾನ್​ನ ಟೋಕಿಯೊದಲ್ಲಿ '37ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ' ಎಂಬ ಸಮ್ಮೇಳನ ಆಯೋಜಿಸಲಾಗಿತ್ತು.

ಸಮ್ಮೇಳನದಲ್ಲಿ ಕರ್ನಾಟಕದಿಂದ ಆಗಮಿಸಿದ್ದ ವಿವಿಧ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಿವಗಂಗೆ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಪರಿಷತ್ ಅಧ್ಯಕ್ಷ ಮಂಜುನಾಥ ಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net