ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ ...! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

south block
Published on

ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆಯು ಚೀನಿ ನಿರ್ಮಿತ 52 ಆ್ಯಪ್​ಗಳ ಬಳಕೆ ಅಪಾಯಕಾರಿ ಎಂದು ಎಚ್ಚರಿಸಿದೆ. ಇದನ್ನು ಬ್ಲಾಕ್​ ಮಾಡಬೇಕು ಇಲ್ಲವೇ, ಬಳಸದಂತೆ ಜನರಿಗೆ ಸೂಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಭದ್ರತಾ ಮಂಡಳಿ ಕೂಡ ಈ ಪ್ರಸ್ತಾವನೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ.

ಈ ಆ್ಯಪ್​ಗಳು ಬಳಕೆಗೆ ಸುರಕ್ಷಿತವಲ್ಲ, ಜತೆಗೆ ಇವುಗಳ ಮೂಲಕ ಅಪಾರ ಪ್ರಮಾಣದ ಡೇಟಾ ದೇಶದಿಂದ ಹೊರಗೆ ರವಾನೆಯಾಗುತ್ತಿದೆ. ಹೀಗಾಗಿ ಇವುಗಳಿಂದ ದೂರವಿರುವುದೇ ಒಳ್ಳೆಯದು ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಆ್ಯಪ್​ಗಳ ಪಟ್ಟಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್​ಗೆ ಬಳಸಲಾಗುವ ಝೂಮ್​, ಕಿರು ವಿಡಿಯೋಗಳ ಆ್ಯಪ್​ ಟಿಕ್​ಟಾಕ್​, ಯುಸಿ ಬ್ರೌಸರ್​, ಕ್ಸೆಂಡರ್​ ಶೇರ್​ ಇಟ್​ ಹಾಗೂ ಕ್ಲೀನ್ ಮಾಸ್ಟರ್​ ಆ್ಯಪ್​ಗಳು ಪ್ರಮುಖವಾಗಿವೆ. ಈ ಆ್ಯಪ್​ಗಳು ದೇಶದ ಭದ್ರತೆಗೂ ಧಕ್ಕೆ ಉಂಟುಮಾಡಬಲ್ಲವು ಎಂದು ಹೇಳಲಾಗಿದೆ.

ಕಳೆದ ಏಪ್ರಿಲ್​ನಲ್ಲಿ ಝೂಮ್​ ಆ್ಯಪ್​ ಬಳಸದಂತೆ ಕೇಂದ್ರ ಗೃಹ ಸಚಿವಾಲಯವೇ ನಿರ್ದೇಶನ ನೀಡಿತ್ತು. ಹಲವು ಆ್ಯಂಡ್ರಾಯ್ಡ್​ ಹಾಗೂ ಐಫೋನ್​ ನಿರ್ವಹಣಾ ಸಾಫ್ಟ್​ವೇರ್​ಗಳನ್ನು ಚೀನಿ ಕಂಪನಿಗಳು ಅಥವಾ ಚೀನಾದೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳೇ ನಿರ್ಮಿಸುವುದರಿಂದ ವೈರಸ್​ಗಳನ್ನು ಹರಡಲು ಬಳಸಬಹುದು. ಇದರಿಂದ ಡೇಟಾಗೆ ಭದ್ರತೆಯೇ ಇಲ್ಲವಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ಚೀನಿ ಆ್ಯಪ್​ಗಳ ಪಟ್ಟಿ ಇಲ್ಲಿದೆ.

* TikTok, Vault-Hide, Vigo Video, Bigo Live, Weibo

* WeChat, SHAREit, UC News, UC Browser

* BeautyPlus, Xender, ClubFactory, Helo, LIKE

* Kwai, ROMWE, SHEIN, NewsDog, Photo Wonder

* APUS Browser, VivaVideo- QU Video Inc

* Perfect Corp, CM Browser, Virus Cleaner (Hi Security Lab)

* Mi Community, DU recorder, YouCam Makeup

* Mi Store, 360 Security, DU Battery Saver, DU Browser

* DU Cleaner, DU Privacy, Clean Master – Cheetah

* CacheClear DU apps studio, Baidu Translate, Baidu Map

* Wonder Camera, ES File Explorer, QQ International

* QQ Launcher, QQ Security Centre, QQ Player, QQ Music

* QQ Mail, QQ NewsFeed, WeSync, SelfieCity, Clash of Kings

* Mail Master, Mi Video call-Xiaomi, Parallel Space

ಚೀನಾ ಅಕ್ರಮಣಕಾರಿ ನೀತಿ ಕಾರಣದಿಂದಾಗಿ ಪಾಶ್ಚಾತ್ಯ ದೇಶಗಳು ಚೀನಾದ ಸಾಫ್ಟ್​ವೇರ್​ ಹಾಗೂ ಹಾರ್ಡವೇರ್​ಗಳ ಬಳಕೆಯಿಂದ ದೂರವಿರುವಂತೆ ಆಗಾಗ ಸಲಹೆ ನೀಡುತ್ತಲೇ ಇರುತ್ತವೆ. ಇದಲ್ಲದೇ, ಸಂವಹನ ವ್ಯವಸ್ಥೆಯನ್ನು ಕುಸಿಯುವಂತೆ ಚೀನಾ ಮಾಡಲಿದೆ ಎಂಬ ಆತಂಕವೂ ಇದೆ.

ಈ ಪೈಕಿ ಕೆಲವು ಸ್ಮಾರ್ಟ್​ ಫೋನ್​ಗಳೊಂದಿಗೆ ( ಚೀನಾ ನಿರ್ಮಿತ) ಇನ್​ಬಿಲ್ಟ್​ ಆಗಿರುವುದರಿಂದ ಅವುಗಳ ಬಳಕೆ ಅನಿವಾರ್ಯವಾಗಬಹುದು. ಆದರೆ, ಬೇರೆಡೆಯಿಂದ ಡೌನ್​ಲೋಡ್​ ಮಾಡಿಕೊಂಡು ಬಳಸುವ ಆ್ಯಪ್​ಗಳನ್ನು ದೂರವಿಡಬಹುದು ಎಂದು ಸಲಹೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net