More

    ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ

    ನವದೆಹಲಿ: ‘ಮೌಂಟ್​ ಎವರೆಸ್ಟ್​ ಹಿನ್ನೆಲೆಯಲ್ಲಿ ಕಂಡು ಸೂರ್ಯನ ಪ್ರಭಾವಳಿ. ಜಗತ್ತಿನ ಅತಿ ಎತ್ತರದ ಈ ಪರ್ವತ ಚೀನಾ ಅಧೀನದ ಟಿಬೆಟ್​ ಸ್ವಾಯತ್ತ ಪ್ರದೇಶದಲ್ಲಿದೆ’…

    ಎವರೆಸ್ಟ್​ ಪರ್ವತದ ಚಿತ್ರವೊಂದನ್ನು ಪೋಸ್ಟ್​ ಮಾಡಿ ಇಂಥದ್ದೊಂದು ಸುದ್ದಿಯನ್ನು ಚೀನಾ ಸರ್ಕಾರಿ ಸುದ್ದಿ ಸಂಸ್ಥೆ ಸಿಜಿಟಿಎನ್​ ಇತ್ತೀಚೆಗೆ ಬಿತ್ತರಿಸಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಎವರೆಸ್ಟ್​ ಪರ್ವತದ ಚಾರಣಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಇದೇ ಅವಧಿಯಲ್ಲಿ ಈ ಪರ್ವತದ ಎತ್ತರ ಅಳೆಯಲು ನೇಪಾಳ ಹಾಗೂ ಚೀನಾ ತಜ್ಞರ ತಂಡ ಸಜ್ಜಾಗಿದೆ. ಇದಕ್ಕಾಗಿ ಎವರೆಸ್ಟ್​ ತಪ್ಪಲಲ್ಇ ಬೀಡುಬಿಟ್ಟಿದೆ. ಈ ತಂಡ ತಿಂಗಳ ಕೊನೆಗೆ ಇದರ ನಿಖರ ಎತ್ತರವನ್ನು ಇನ್ನೊಮ್ಮೆ ಪರೀಕ್ಷೆ ಮಾಡಲಿದೆ.

    ಇದನ್ನೂ ಓದಿ; ನೇಪಾಳದಲ್ಲಿ ಸಂಭವಿಸಿದ ಭೂಕಂಪಕ್ಕೆ ಕುಸಿಯಿತಾ ಮೌಂಟ್ ಏವರೆಸ್ಟ್​?

    ಅಷ್ಟಕ್ಕೂ ಈಗ ಎತ್ತರವನ್ನು ಅಳೆಯಲು ಮುಖ್ಯ ಕಾರಣವೂ ಇದೆ. ಅದೇನೆಂದರೆ, 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭಾರಿ ಭೂಕಂಪ ನೇಪಾಳ ರಾಜಧಾನಿ ಸೇರಿ ದೇಶದ ಬಹುತೇಕ ಭಾಗವನ್ನು ಧ್ವಂಸಗೊಳಿಸಿತ್ತು. ಎವರೆಸ್ಟ್​ ಪರ್ವತದ ತಪ್ಪಲಲ್ಲೂ 8.1 ತೀವ್ರತೆಯಲ್ಲಿ ಭಾರಿ ಕಂಪನ ಉಂಟಾಗಿತ್ತು. ಇದು ಪರ್ವತದ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿಯಲಾಗುತ್ತಿದೆ. ಹಾಗಿದ್ದರೆ, ಭೂಕಂಪದಿಂದಾಗಿ ಮೌಂಟ್​ ಎವರೆಸ್ಟ್​ ಚೀನಾಗೆ ಸೇರ್ಪಡೆಯಾಗಿದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಮೌಂಟ್ ಎವರೆಸ್ಟ್​ ನೇಪಾಳದಲ್ಲಿದೆ. ಸುಳ್ಳು ಸುದ್ದಿ ಹಬ್ಬುವುದನ್ನು ನಿಲ್ಲಿಸಿ. ‘#BackOffChina’ ಎಂಬ ಹೆಸರಿನಲ್ಲಿ ಚೀನಾ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ನೇಪಾಳ ಸರ್ಕಾರ ಚೀನಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೇಪಾಳಿಗರು ಒತ್ತಾಯಿಸುತ್ತಿದ್ದಾರೆ.

    ಇದನ್ನೂ ಓದಿ; ಮತ್ತೆ 556 ಎಸ್​ಐ​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೊಲೀಸ್​ ಇಲಾಖೆ

    ಗಡಿ ವಿಚಾರದಲ್ಲಿ ಚೀನಾ ತಂಟೆ ತೆಗೆಯುವುದು ಇದೇ ಮೊದಲೇನೂ ಅಲ್ಲ. ಆದರೆ, ಮೌಂಟ್​ ಎವರೆಸ್ಟ್​ ಛಾರಣ ಹಾಗೂ ಮಾನಸ ಸರೋವರ ಯಾತ್ರೆ ವಿಚಾರದಲ್ಲಿ ಭಾರತೀಯರು ಈ ಕಿರುಕುಳಕ್ಕೆ ಒಳಗಾಗುತ್ತಲೇ ಇರುತ್ತಾರೆ.

    ಇದೀಗ ಮೌಂಟ್​ ಎವರೆಸ್ಟ್​ ಎತ್ತರ ಅಳೆಯುವ ವಿಷಯವನ್ನಿಟ್ಟುಕೊಂಡು ಹೊಸ ಗಡಿ ತಂಟೆ ಹುಟ್ಟು ಹಾಕಲು ಚೀನಾ ಮುಂದಾಗಿದೆಯೇ ಎಂಬ ಅನುಮಾನ ಶುರುವಾಗಿದೆ. ಇದಕ್ಕಾಗಿ ಟಿಬೆಟ್​ ಗಡಿಯನ್ನು ಬಳಸಿಕೊಳ್ಳಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

    ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ

    ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts