More

    ಮತ್ತೆ 556 ಎಸ್​ಐ​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೊಲೀಸ್​ ಇಲಾಖೆ

    ಬೆಂಗಳೂರು: ಲಾಕ್​ಡೌನ್​ ನಡುವೆಯೂ ರಾಜ್ಯದಲ್ಲಿ ನೇಮಕಾತಿಗಳ ಭರಾಟೆ ಮುಂದುವರಿದಿದೆ.
    ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯಲ್ಲಿ ಜಿಲ್ಲಾವಾರು ಸಮಾಲೋಚಕರನ್ನು ನೇಮಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಜತೆಗೆ, ನಾಡಕಚೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್​ಗಳ ಭರ್ತಿಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಈಗಾಗಲೇ ನಿರ್ದೇಶನಾಲಯ ಸೂಚಿಸಿದೆ.

    ಪೊಲೀಸ್​ ಇಲಾಖೆಯಲ್ಲಿಯೂ 2,672 ಕಾನ್​ಸ್ಟೆಬಲ್​ ಹುದ್ದೆ ಹಾಗೂ 162 ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಕ್ಕೆ ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಲಾಗಿದೆ.

    ಇದನ್ನೂ ಓದಿ; ರಾಜ್ಯದ ನಾಡಕಚೇರಿಗಳಿಗೆ ಬೇಕಾಗಿದ್ದಾರೆ ಡೇಟಾ ಎಂಟ್ರಿ ಆಪರೇಟರ್ಸ್, ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಡೆಯಲಿದೆ ನೇಮಕಾತಿ

    ಇದೀಗ ಮತ್ತೆ 556 ಸಬ್​ ಇನ್​ಸ್ಪೆಕ್ಟರ್​ (ಸಿವಿಲ್​) ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆಗಳನ್ನು ಆರಂಭಿಸಿದೆ. ಇದರಲ್ಲಿ 125 ಹುದ್ದೆಗಳು ಹೈದರಾಬಾದ್​ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ. 431 ಹುದ್ದೆಗಳು ಉಳಿದ ವೃಂದಕ್ಕೆ ಮೀಸಲಾಗಿವೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

    ಈ ಹುದ್ದೆಗಳಿಗೆ ಜೂನ್​ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಘಲಿದೆ. ಅರ್ಜಿ ಸಲ್ಲಿಸಲು ಜೂನ್​ 30 ಕೊನೆಯ ದಿನವಾಗಿದೆ.
    ವಿವರಗಳಿಗೆ https://www.ksp.gov.in/ ಲಾಗಿನ್​ ಆಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.

    ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts