More

    ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯು ಕರ್ನಾಟಕ ರಾಜ್ಯ ಮೀಸಲು ಪೊಲೀಸ್​ (ಕೆಎಸ್​ಆರ್​ಪಿ) ಪಡೆಯಲ್ಲಿ 2,672 ಕಾನ್​ಸ್ಟೆಬಲ್​ ಹಾಗೂ ವಿವಿಧ ಪಡೆಗಳಲ್ಲಿ 162 ಎಸ್​ಐ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

    ಪೊಲೀಸ್​ ಪಡೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಇಚ್ಛಿಸುವ ಧೈರ್ಯಶಾಲಿ ಹಾಗೂ ಶಿಸ್ತುಬದ್ಧ ಹಾಗೂ ಸೇವಾಸಕ್ತರಿಗಾಗಿ ಈ ಅವಕಾಶ ಕಲ್ಪಿಸುತ್ತಿರುವುದಾಗಿ ಪೊಲೀಸ್​ ಇಲಾಖೆ ತಿಳಿಸಿದೆ.

    ಇದನ್ನೂ ಓದಿ; ಲಾಕ್​ಡೌನ್​ ನಡುವೆಯೇ ವಿವಿಧ ಇಲಾಖೆಯ 210 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್​ಸಿ

    ವಿಶೇಷ ಮೀಸಲು ಪೊಲೀಸ್​ ಕಾನ್​ಸ್ಟೆಬಲ್​ಗಳ 2,420 ಹುದ್ದೆಗಳಿದ್ದು, 252 ಬ್ಯಾಂಡ್ಸ್​ಮೆನ್​ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

    ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೇ 8ರಿಂದ ksp.gov.in ಮೂಲಕ ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್​ 15 ಕೊನೆಯ ದಿನಾಂಕವಾಗಿದೆ.

    ಇದನ್ನೂ ಓದಿ; ಕೆಲಸ ಹುಡುಕುತ್ತಿದ್ದೀರಾ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆಯಲ್ಲಿ ಸಮಾಲೋಚಕರಾಗಿ

    ಇನ್ನು, ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಮೀಸಲು ಪಡೆಯಲ್ಲಿ 45, ಕೆಎಸ್​ಆರ್​ಪಿ-40, ಕೆಎಸ್​ಐಎಸ್​ಎಫ್​-51 ಹಾಗೂ ವೈರಲೆಸ್​ ವಿಭಾಗದಲ್ಲಿ 26 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
    ಎಸ್​ಐ ಹುದ್ದೆಗಳಿಗೆ ಮೇ 26ರಿಂದ ಜೂನ್​ 26ರವರೆಗೆ ಅರ್ಜಿ ಸಲ್ಲಿಸಬಹುದು.

    ವಿವರಗಳು ಹಾಗೂ ಅರ್ಜಿ ಭರ್ತಿ ಮಾಡಲು ಈ ಲಿಂಕ್​ ಬಳಸಬಹುದು: http://rec19.ksp-online.in/.

    ವಿದ್ಯಾರ್ಹತೆ ಹಾಗೂ ಮೀಸಲಾತಿ ಕುರಿತಾದ ಅಧಿಸೂಚನೆ, ಅರ್ಜಿ ನಮೂನೆ ಮೊದಲಾವುಗಳನ್ನು ವೆಬ್​ಸೈಟ್​ನಲ್ಲಿ ಪಡೆಯಬಹುದು.

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts