More

    ಲಾಕ್​ಡೌನ್​ ನಡುವೆಯೇ ವಿವಿಧ ಇಲಾಖೆಯ 210 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್​ಸಿ

    ಬೆಂಗಳೂರು: ರಾಜ್ಯಾದ್ಯಂತ ಲಾಕ್​ಡೌನ್​ ಕಾರಣದಿಂದಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಪರೀಕ್ಷೆ, ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳನ್ನು ಮುಂದೂಡಿದೆ. ಹಲವು ನೆಮಕಗಳಿಗೆ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದಿದೆ. ಆದರೆ, ಕೆಲ ಹುದ್ದೆಗಳ ಭರ್ತಿಗೆ ಆಯ್ಕೆ ಪಟ್ಟಿ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ.

    ಕಾರ್ಮಿಕರ ರಾಜ್ಯ ವಿಮಾ ಸೇವೆಯ ವೈದ್ಯಕೀಯ ವಿಮಾ ಅಧಿಕಾರಿಗಳ ಒಟ್ಟು 159 (ಹೈ.ಕ 16 ಸ್ಥಾನಗಳು ಸೇರಿ) ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

    ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಮೂವರು ಮಹಿಳಾ ಸ್ಟಾಫ್​ ನರ್ಸ್​ಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಇಲಾಖೆಯ ನವೋದಯ ವಸತಿ ಶಾಲೆಗಳಲ್ಲಿ ಸ್ನಾತಕೋತ್ತರ ಪದವೀಧರ ಕಂಪ್ಯೂಟರ್​ ಶಿಕ್ಷಕರ ಆರು ಹುದ್ದೆಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

    ಸ್ಣಾತಕೋತ್ತರ ಪದವೀಧರ ಇಂಗ್ಲಿಷ್​ ಭಾಷಾ ಬೋಧಕರ ಆರು ಹುದ್ದೆಗಳು (1 ಹೈದರಾಬಾದ್​ ಕರ್ನಾಟಕ ಮೀಸಲು ಸೇರಿ) ಹಾಗೂ ಸ್ನಾತಕೋತ್ತರ ಪದವೀಧರ ಗಣಿತ ಶಿಕ್ಷಕರ ಆರು ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್​ಸಿ ಪ್ರಕಟಿಸಿದೆ.
    ಈ ಎಲ್ಲ ಆಯ್ಕೆ ಪಟ್ಟಿಯನ್ನು ಏಪ್ರಿಲ್​ 24ರಂದು ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಪಟ್ಟಿ ಪ್ರಕಟವಾದ ಏಳು ದಿನಗಳೊಳಗೆ ಸಲ್ಲಿಸಬೇಕೆಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

    ಅಂತಿಮ ಆಯ್ಕೆ ಪ್ರಕಟ
    ಮುರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ: ಮುರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರು, ಕನ್ನಡ ಉಪನ್ಯಾಸಕರು, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ( ಮೂರು ಹುದ್ದೆಗಳಲ್ಲಿ ತಲಾ 3 ಹೈ-ಕ ಮೀಸಲು ಹಾಗೂ ತಲಾ 7 ಇತರ ವೃಂದದ ಹುದ್ದೆಗಳಿವೆ) ನೇಮಕಕ್ಕೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.

    ವಿವರಗಳಿಗೆ http://kpsc.kar.nic.in/ ಸಂಪರ್ಕಿಸಬಹುದು.

    ವಲಸೆ ಕಾರ್ಮಿಕರಿಗೆ ವಿಶೇಷ ರೈಲು, ಉಚಿತ ಪ್ರಯಾಣ; ರೈಲ್ವೆ ಇಲಾಖೆಯಿಂದಲೇ ಸಿದ್ಧವಾಗುತ್ತಿದೆ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts