More

  ಸಾಧನೆ ತೋರಿದ ವಿದ್ಯಾರ್ಥಿಗೆ ಸನ್ಮಾನ

  ಕಮತಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಪಟ್ಟಣದ ವಿದ್ಯಾರ್ಥಿಯನ್ನು ಶಾಲೆ ಶಿಕ್ಷಕ ವೃಂದದವರು ಆತನ ಮನೆಗೆ ಆಗಮಿಸಿ ಸನ್ಮಾನಿಸಿ ಗೌರವಿಸಿದರು.

  ಗ್ರಾಮದ ಪ್ರಜ್ವಲ್ ಮುತ್ತಪ್ಪ ಉಗಲವಾಟ ಹುನಗುಂದ ತಾಲೂಕಿನ ಅಮೀನಗಡ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಓದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 594ಅಂಕ ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದುಕೊಂಡಿದ್ದಾರೆ.

  ವಿದ್ಯಾರ್ಥಿ ನಿವಾಸಕ್ಕೆ ಆಗಮಿಸಿದ ಇಂದಿರಾಗಾಂಧಿ ವಸತಿ ಶಾಲೆ ಮುಖ್ಯಶಿಕ್ಷಕಿ ಜಯಶ್ರೀ ಮುರನಾಳ, ಶಿಕ್ಷಕರಾದ ಆದಿತ್ಯಕುಮಾರ, ಮಹಾದೇವ ಬೆಳಗಲಿ, ಸಿದ್ದು ತುಂಗಳ, ಇಬ್ರಾಹಿಂ ಜಾಗೀರದಾರ ಅವರು ಪ್ರಜ್ವಲ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜ್ವಲ್ ತಾಯಿ ವೆಂಕಮ್ಮ, ಸಹೋದರಿ ಪ್ರೇಕ್ಷಾ, ಹನುಮಂತ ನಾಗನೂರ, ಕಸಾಪ ಬಾಗಲಕೋಟೆ ತಾಲೂಕು ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts