More

    ಗ್ರಾಮೀಣ ಬ್ಯಾಂಕ್ ಖಾಸಗೀಕರಣ ಬೇಡ

    ಚಿಕ್ಕಮಗಳೂರು: ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳು ಗ್ರಾಮೀಣ ಬ್ಯಾಂಕ್ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಗ್ರಾಮೀಣ ಬ್ಯಾಂಕ್‌ಗಳ ಎಲ್ಲ ದಿನಗೂಲಿ ಹೊರಗುತ್ತಿಗೆ ನೌಕರರನ್ನು ಒಂದು ಬಾರಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾಯಂ ಮಾಡಬೇಕು. ಎಲ್ಲ ತರಹದ ವಿಮಾ ಸರಕುಗಳ ಮಾರಾಟ ರದ್ದಾಗಬೇಕು. ಪ್ರೇರಕ ಬ್ಯಾಂಕ್‌ಗಳಂತೆ ಸಿಬ್ಬಂದಿ ಸೇವಾ ನಿಯಮಗಳು, ಭರ್ತಿ ಪ್ರಕ್ರಿಯೆಗಳು, ಪಿಂಚಣಿ ನಿಯಮ, ಅನುಕಂಪ ಆಧಾರಿತ ನೇಮಕಾತಿ, ವೇತನ ಶ್ರೇಣಿ ಮತ್ತಿತರ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
    ಪ್ರೇರಕ ಬ್ಯಾಂಕುಗಳ ಆಡಳಿತದಿಂದ ಮುಕ್ತಿಪಡೆದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಅದರಡಿ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕ್‌ಗಳನ್ನು ರಚಿಸಬೇಕು. ಒಂದು ಬಾರಿ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ನಡೆಸುವ ಮೂಲಕ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಬಡ್ತಿ ನಿಯಾಮವಳಿಗಳನ್ನು ಶೀಘ್ರವೇ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
    ಗ್ರಾಮೀಣ ಬ್ಯಾಂಕ್ ಹಾಗೂ ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಹಲವು ವರ್ಷಗಳ ಬೇಡಿಕೆಗಳು ಹಾಗೆಯೇ ಉಳಿದಿವೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಎಐಆರ್‌ಆರ್‌ಬಿಇಎ ಜನರಲ್ ಕೌನ್ಸಿಲ್ ಸಭೆಯಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ವಿವಿಧ ಹಂತದ ಹೋರಾಟ ರೂಪಿಸಲು ದೇಶಾದ್ಯಂತ ಎಲ್ಲ ಗ್ರಾಮೀಣ ಬ್ಯಾಂಕ್‌ಗಳಿಗೆ ಈ ಹಿಂದೆಯೇ ನೋಟಿಸ್ ಕಳುಹಿಸಲಾಗಿತ್ತು. ಅವರು ಗಮನಹರಿಸದಿದ್ದರಿಂದ ಈಗ ಮುಷ್ಕರ ನಡೆಯುತ್ತಿದೆ ಎಂದರು.
    ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರ್ಷ ಎಸ್. ರಾವ್, ಕಾರ್ಯಕಾರಿ ಸದಸ್ಯರಾದ ಗುರುಮೂರ್ತಿಭಟ್, ಕೆ.ಎನ್.ಅಲೋಕ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಶೋಕ, ನಿವೃತ್ತ ಅಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಉಮಾಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts