More

    ರಾಜ್ಯದ ನಾಡಕಚೇರಿಗಳಿಗೆ ಬೇಕಾಗಿದ್ದಾರೆ ಡೇಟಾ ಎಂಟ್ರಿ ಆಪರೇಟರ್ಸ್, ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಡೆಯಲಿದೆ ನೇಮಕಾತಿ

    ಬೆಂಗಳೂರು: ರಾಜ್ಯದ ಎಲ್ಲ ನಾಡಕಚೇರಿಗಳಿಗೆ ಡೇಟಾ ಎಂಟ್ರಿ ಆಪರೇಟರ್​ಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನೇಮಕಾರಿ ಮಾಡಿಕೊಳ್ಳಲು ಸರ್ಕಾರ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ, 14 ಜಿಲ್ಲೆಗಳ ನಾಡಕಚೇರಿಗಳಲ್ಲಿ ಖಾಲಿಯಿರುವ​ 500ಕ್ಕೂ ಅಧಿಕ ಡೇಟಾ ಎಮಟ್ರಿ ಆಪರೇಟರ್​ಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

    ಅಟಲ್​ಜೀ ಜನಸ್ನೇಹಿ ಕೇಂದ್ರಗಳಿಗೆ (ನಾಡಕಚೇರಿ) ಡೇಟಾ ಎಂಟ್ರಿ ಆಪರೇಟರ್​ಗಳನ್ನು ಹೊಗುತ್ತಿ್ಎ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಟೆಂಡರ್​ ಕರೆಯುವ ಹಾಗೂ ನೇಂಕಾತಿ ನಡೆಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

    ಇದನ್ನೂ ಓದಿ; ಲಾಕ್​ಡೌನ್​ ನಡುವೆಯೇ ವಿವಿಧ ಇಲಾಖೆಯ 210 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್​ಸಿ

    ವಿವಿಧ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳಲಿರುವ ಡೇಟಾ ಎಂಟ್ರಿ ಆಪರೇಟರ್​ಗಳು:
    ಚಾಮರಾಜನಗರ- 22, ಚಿಕ್ಕಮಗಳೂರು-44, ಚಿತ್ರದುರ್ಗ-31, ದಕ್ಷಿಣಕನ್ನಡ-27, ಧಾರವಾಡ-24, ಗದಗ-21, ಹಾವೇರಿ-33, ಕೊಪ್ಪಳ-28, ಮಂಡ್ಯ-55, ಮೈಸೂರು-47, ರಾಯಚೂರು-45, ರಾಮನಗರ-23, ಶಿವಮೊಗ್ಗ-52, ಉತ್ತರಕನ್ನಡ ಜಿಲ್ಲೆಯಲ್ಲಿ 52 ಡೇಟಾ ಎಂಟ್ರಿ ಆಪರೆಟರ್​ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
    ಹೆಚ್ಚುವರಿ ಹುದ್ದೆಗಳು ಸ್ಥಗಿತ: ಈ-ಕ್ಷಣ ಯೋಜನೆಯಲ್ಲಿ ಡೇಟಾ ಎಂಟ್ರಿ ಕೆಲಸ ಶೇ.70 ಮುಗಿದಿರುವುದರಿಂದ ಅವರ ಸೇವೆಯನ್ನು ಸ್ಥಗಿತಗೊಳಿಸಲು ಸರ್ಕಾರ ಸೂಚಿಸಿದೆ. ಜತೆಗೆ, ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್​ಗಳ ಸೇವೆಯನ್ನು ನಿಲ್ಲಿಸುವಂತೆ ಈಗಾಗಲೇ ಆದೇಶ ಹೊರಡಿಸಿದೆ.

    ಇದನ್ನೂ ಓದಿ; ಕೆಲಸ ಹುಡುಕುತ್ತಿದ್ದೀರಾ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆಯಲ್ಲಿ ಸಮಾಲೋಚಕರಾಗಿ

    ಒಟ್ಟಾರೆ ರಾಜ್ಯದ ಎಲ್ಲ ನಾಡಕಚೇರಿಗಳಿಗೆ ಈ ಮೊದಲು ನಿಗದಿಪಡಿಸಿದ 1,916 ಡೇಟಾ ಎಂಟ್ರಿ ಆಪರೇಟರ್​ಗಳ ಬದಲು ಈಗ 1,121 ಜನರನ್ನು ನೇಮಕ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

    ಕೆಲ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗದ ಕಾರಣ, ಕೂಡಲೇ ಭರ್ತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅಟಲ್​ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರು ಸೂಚಿಸಿದ್ದಾರೆ.

    ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts