More

    ಯೂನಿಯನ್ ಬ್ಯಾಂಕ್​ನಿಂದ ರಿಟೇಲ್ ಎಕ್ಸ್​ಪೋ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯಿಂದ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಶನಿವಾರ ರಿಟೇಲ್ ಎಕ್ಸ್​ಪೋ ಆಯೋಜಿಸಲಾಗಿತ್ತು.

    30ಕ್ಕೂ ಹೆಚ್ಚು ಮಳಿಗೆಗಳು ಇದ್ದವು. ಎಲ್ಲ ಮಾದರಿಯ ವಾಹನಗಳು, ವಿಮಾ ಕಂಪನಿಗಳು, ಎಜ್ಯುಕೇಶನಲ್ ಕನ್ಸಲ್ಟಂಟ್​ಗಳು, ಬಿಲ್ಡರ್ಸ್, ಡೆವಲಪರ್ಸ್ ಭಾಗವಹಿಸಿದ್ದರು.

    ಯೂನಿಯನ್ ಬ್ಯಾಂಕ್​ನ ಎಲ್ಲ ರಿಟೇಲ್ ಲೋನ್​ಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್​ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಭೈರೇಗೌಡ, ಉಪ ಮುಖ್ಯಸ್ಥರಾದ ಕೆ. ದೀಪಕಕುಮಾರ, ರಿತೇಶಕುಮಾರ, ಬಿಶ್ವಜೀತ್ ಸಿಂಗ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts